ಮಹಲಿಂಗಪುರ

ಮಹಾಲಿಂಗಪುರ ಸುವರ್ಣ ಮಹೋತ್ಸವ; ರುದ್ರಾಭಿಷೇಕ, ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು

ಮಹಾಲಿಂಗಪುರ ಸುವರ್ಣ ಮಹೋತ್ಸವ; ರುದ್ರಾಭಿಷೇಕ, ಹೋಮ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು

ಲೋಕದರ್ಶನ ವರದಿ 

ಮಹಾಲಿಂಗಪುರ 31: ಸ್ಥಳೀಯ ಜಿಎಲ್‌ಬಿಸಿ ಆವರಣದಲ್ಲಿರುವ ಹನುಮಂತೇಶ್ವರ ದೇವಸ್ಥಾನಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಾ. 2ರ ಗುರುವಾರ ಹನುಮ ಜಯಂತಿಯ ಪ್ರಯುಕ್ತ ಸುವರ್ಣ ಮಹೋತ್ಸವದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅರ್ಚಕ ಮಹಾಲಿಂಗ ಪೂಜಾರಿ ತಿಳಿಸಿದ್ದಾರೆ.  

ಅಂದು ಮುಂಜಾನೆ 5 ಗಂಟೆಗೆ ರುದ್ರಾಭಿಷೇಕ,  6.30ಕ್ಕೆ ನಾಮಕರಣ, 7 ಗಂಟೆಗೆ ಪವಮಾನ ಹೋಮ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದ್ದಾರೆ.  

1976ರಲ್ಲಿ ಆರಂಭವಾದ ದೇವಸ್ಥಾನ 50 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು  ದೀಪಾಲಂಕಾರಗಳಿಂದ ಅಲಂಕರಿಸಲಾಗಿದ್ದು ಹೋಮ ಹವನ, ಅಭಿಷೇಕ ಮುಂತಾದ ಕಾರ್ಯಗಳ ಭರದ ಸಿದ್ಧತೆ ನಡೆದಿದೆ. 


ಸುದ್ದಿ ಓದಿ