ಸ್ವೀಡನ್ ಪ್ರಥಮ ಮಹಿಳಾ ಪ್ರಧಾನಿಯಾಗಿ ಮ್ಯಾಗ್ಡಲೀನಾ ಆಂಡರ್ಸನ್
ಜ್ಯೂರಿಚ್, ನ.24: ಸ್ವೀಡಿಷ್ ಸಂಸತ್ತು ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಪ್ರಧಾನಿಯನ್ನು ಆಯ್ಕೆ ಮಾಡಿದೆ.
ಸ್ವೀಡನ್‌ನ ಏಕಸದಸ್ಯ ಸಂಸತ್ತು ರಿಕ್ಸ್‌ಡಾಗ್ ಬುಧವಾರ ಸ್ವೀಡನ್‌ನ ಸೋಶಿಯಲ್ ಡೆಮಾಕ್ರಟಿಕ್ ಲೇಬರ್ ಪಾರ್ಟಿಯ ನಾಯಕಿ ಮ್ಯಾಗ್ಡಲೀನಾ ಆಂಡರ್ಸನ್ ಅವರನ್ನು ಪ್ರಧಾನಿಯಾಗಿ ನೇಮಿಸಲು ಮತ ಚಲಾಯಿಸಿದ್ದು, ದೇಶದ ಇತಿಹಾಸದಲ್ಲಿ ಅಧಿಕಾರ ವಹಿಸಿಕೊಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸ್ವೀಡನ್‌ನ ಸಂಸತ್ತು ರಿಕ್ಸ್‌ಡಾಗ್ 349 ಸದಸ್ಯ ಬಲ ಹೊಂದಿದ್ದು, ಆಂಡರ್ಸನ್ ಅವರ ಅಂಗೀಕಾರಕ್ಕೆ ಕನಿಷ್ಠ 175 ಮತಗಳ ಅಗತ್ಯವಿತ್ತು. 117 ನಿಯೋಗಿಗಳು ಅವರ ಉಮೇದುವಾರಿಕೆ ಪರವಾಗಿ ಮತ ಹಾಕಿದರು, 174 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರೆ, 57 ಸದಸ್ಯರು ಗೈರುಹಾಜರಾಗಿದ್ದರು.
ಡೆಮಾಕ್ರಟಿಕ್ ಲೇಬರ್ ಪಕ್ಷದ ನಾಯಕ, ಪ್ರಧಾನಿ ಸ್ಟೀಫನ್ ಲೋಫ್ವೆನ್ ಈ ವರ್ಷಾರಂಭದಲ್ಲಿ ತಮ್ಮ ಸ್ಥಾನ ತ್ಯಜಿಸಿದ್ದರು. ಇದೀಗ ಅವರ ಸ್ಥಾನಕ್ಕೆ ಆಂಡರ್ಸನ್ ಅವರನ್ನು ಆಯ್ಕೆಮಾಡಲಾಗಿದೆ.