IPL ವೇಳೆ ಗ್ಯಾಲರಿಯಲ್ಲಿ ಪ್ರೇಮ ನಿವೇದನೆ; ಆರ್ ಸಿಬಿ ಫ್ಯಾನ್ ಗೆ ವಾಸಿಂ ಜಾಫರ್ ಹೇಳಿದ್ದೇನು?
ಮುಂಬೈ: ಮೇ 05: ಬುಧವಾರ ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ಪ್ರೇಕ್ಷಕರ ಗ್ಯಾಲರಿ ಪ್ರೇಮ ನಿವೇದನೆಗೆ ಸಾಕ್ಷಿಯಾಗಿತ್ತು.
ಆರ್ಸಿಬಿ 13 ರನ್ಗಳಿಂದ ಜಯಭೇರಿ ಬಾರಿಸಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ ಈ ಪಂದ್ಯದ ವೇಳೆ ಆಟದ ಬ್ಯಾಕೆಂಡ್ನಲ್ಲಿ ಯುವತಿಯು ತನ್ನ ಸಂಗಾತಿಗೆ ಪ್ರಪೋಸ್ ಮಾಡಿದ ವೀಡಿಯೋ ಇದೀಗ ವೈರಲ್ ಆಗಿದೆ.
ಸಿಎಸ್ ಕೆ ಚೇಸಿಂಗ್ ನ ಕೊನೆಯ ಕೆಲವು ಓವರ್ಗಳಲ್ಲಿ ಸ್ಟ್ಯಾಂಡ್ನಲ್ಲಿದ್ದ ಹುಡುಗಿಯೊಬ್ಬಳು ತನ್ನ ಸಂಗಾತಿಗೆ ಪ್ರಪೋಸ್ ಮಾಡುತ್ತಿದ್ದಳು. ಇಬ್ಬರೂ ಆರ್ ಸಿಬಿ ಜೆರ್ಸಿ ತೊಟ್ಟಿದ್ದರು.
ಈ ಪ್ರಸಂಗವನ್ನ ಭಾರತದ ಮಾಜಿ ಬ್ಯಾಟ್ಸ್ ಮನ್ ವಾಸಿಂ ಜಾಫರ್ ಗಮನಿಸಿದ್ದು, ಆರ್ಸಿಬಿ ಜೆರ್ಸಿ ಧರಿಸಿದ್ದ ಆ ಹುಡುಗನಿಗೆ ಕಿವಿಮಾತು ಹೇಳಿದ್ದಾರೆ.
“ಆರ್ಸಿಬಿ ಅಭಿಮಾನಿಯನ್ನು ಪ್ರಪೋಸ್ ಮಾಡುತ್ತಿರುವ ಬುದ್ಧಿವಂತ ಹುಡುಗಿ. ಅವನು ಆರ್ಸಿಬಿಗೆ ನಿಷ್ಠಾವಂತನಾಗಿರಲು ಸಾಧ್ಯವಾದರೆ, ಅವನು ಖಂಡಿತವಾಗಿಯೂ ತನ್ನ ಸಂಗಾತಿಗೆ ನಿಷ್ಠಾವಂತನಾಗಿರುತ್ತಾನೆ. ವೆಲ್ ಡನ್ ಮತ್ತು ಪ್ರಪೋಸ್ ಮಾಡಲು ಒಳ್ಳೆಯ ದಿನ ಎಂದು ಟ್ವೀಟ್ ಮಾಡಿದ್ದಾರೆ.