ಟ್ರಂಪ್ ಗೆ ನಷ್ಟ ... ಹೋಟೆಲ್ ಮಾರಾಟ....!
ವಾಷಿಂಗ್ಟನ್, ನ 15 -ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕುಟುಂಬಕ್ಕೆ ಸೇರಿದ ಬೃಹತ್ ಹೋಟೆಲ್ ಮಾರಾಟ ಮಾಡಲಾಗುತ್ತಿದೆ. ವಾಷಿಂಗ್ಟನ್‌ನಲ್ಲಿರುವ ಟ್ರಂಪ್ ಇಂಟರ್‌ನ್ಯಾಶನಲ್ ಹೋಟೆಲ್ ಮಾರಾಟ ಮಾಡಲು ಹೊಸದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.
ಭವಿಷ್ಯದಲ್ಲಿ, ಹೋಟೆಲ್ ಹೆಸರು ವಾಲ್ಡೋರ್ಫ್ ಆಸ್ಟೋರಿ ಎಂದು ಮರು ನಾಮಕರಣಗೊಳ್ಳಲಿದೆ. ಇದನ್ನು ಹಿಲ್ಟನ್ ಗ್ರೂಪ್ ನಿರ್ವಹಿಸಲಿದೆ. 263 ಕೊಠಡಿಗಳ ಕಟ್ಟಡವನ್ನು ಟ್ರಂಪ್ ಸಂಸ್ಥೆ 60 ವರ್ಷಗಳ ಗುತ್ತಿಗೆಗೆ ಪಡೆದುಕೊಂಡಿದೆ. 2016 ರಲ್ಲಿ ಹೋಟೆಲ್ ಆರಂಭಗೊಂಡಿತ್ತು. ವಾಸ್ತವವಾಗಿ ಇದು ರಿಪಬ್ಲಿಕನ್ನರಿಗೆ ಕಾಯಂ ವಿಳಾಸದಂತಿದೆ. ಈ ಹೋಟೆಲ್ ನ ಒಟ್ಟು ನಷ್ಟ 70 ಮಿಲಿಯನ್ ಡಾಲರ್ ವರೆಗೆ ಇರಬಹುದು ಎಂದು ಇತ್ತೀಚಿಗೆ ಬಹಿರಂಗಪಡಿಸಲಾಗಿತ್ತು. 2019ರಿಂದಲೇ ಮಾರಾಟ ಮಾಡಲು ನಿರ್ಧರಿಸಿದ್ದರೂ.. ಖರೀದಿದಾರರು ಲಭ್ಯವಾಗಿರಲಿಲ್ಲ.
ಇತ್ತೀಚೆಗೆ, ಮಿಯಾಮಿ ಮೂಲದ ಸಿಜಿಐ ಮರ್ಚೆಂಟ್ ಗ್ರೂಪ್ ಇದನ್ನು ಖರೀದಿಸಲು ಆಸಕ್ತಿ ತೋರಿಸಿದೆ. ಮುಂದಿನ ವರ್ಷದ ಮೊದಲ ತ್ರೈಮಾಸಿಕದ ವೇಳೆಗೆ ಒಪ್ಪಂದ ಪೂರ್ಣಗೊಳಿಸಬಹುದು ಎಂದು ವಾಲ್ ಸ್ಟ್ರೀಟ್ ಹೇಳಿದೆ. ಶ್ವೇತಭವನದಿಂದ ಸುಮಾರು ಒಂದು ಮೈಲಿ ದೂರದಲ್ಲಿರುವ ಪೆನ್ಸಿಲ್ವೇನಿಯಾ ಅವೆನ್ಯೂದಲ್ಲಿ ರುವ ಪೋಸ್ಟ್ ಆಫೀಸ್ ಕಟ್ಟಡವನ್ನು ಹೋಟೆಲ್ ಆಗಿ ಪರಿವರ್ತಿಸಲಾಗಿದೆ. 2012 ರಲ್ಲಿ ಇದರ ಅಭಿವೃದ್ಧಿಗೆ ಒಪ್ಪಿಗೆ ನೀಡಲಾಗಿತ್ತು. 2016 ರಲ್ಲಿ ಟ್ರಂಪ್ ನಾಮ ನಿರ್ದೇಶನಗೊಂಡ ಕೆಲವು ವಾರಗಳ ನಂತರ ಈ ಹೋಟೆಲ್ ಆರಂಭಿಸಲಾಗಿತ್ತು. ಟ್ರಂಪ್ ಇತ್ತೀಚೆಗೆ ತಮ್ಮ ಹೋಟೆಲ್ ವ್ಯವಹಾರದ ಲಾಭವನ್ನು 150 ಮಿಲಿಯನ್‌ಗೆ ಡಾಲರ್ ಗೆ ಹೆಚ್ಚಿಸಿದ್ದರು. ವಾಸ್ತವವಾಗಿ, ಇದರ ಬಗ್ಗೆ US ಕಾಂಗ್ರೆಸ್ ತನಿಖೆ ನಡೆಸಿದ ನಂತರ 70 ಮಿಲಿಯನ್ ಡಾಲರ್ ನಷ್ಟಗೊಂಡಿತ್ತು ಎಂದು ಹೇಳಲಾಗಿದೆ.