ಅಮೆರಿಕಾದಲ್ಲಿ ಮತ್ತೆ ಲಾಕ್ ಡೌನ್ ..? ನಿಜವೇನಾ ... !!
ವಾಷಿಂಗ್ಟನ್,
ನವೆಂಬರ್ 20: ಅಮೆರಿಕಾದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈ ಹಿಂದೆ ನಿತ್ಯ
70 ರಿಂದ 80 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿದ್ದರೆ.. qa ಈಗ ಆ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿವೆ. ಪ್ರತಿದಿನ
ಒಂದೂವರೆ ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಶೀಘ್ರದಲ್ಲೇ ಅಮರಿಕಾ ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿರುವ
ಜೋ ಬೈಡೆನ್ ಅವರಿಗೆ ಇದು ದೊಡ್ಡ ಸಮಸ್ಯೆಯಾಗುವ ಸಾಧ್ಯತೆಯಿದೆ.
ಅಧಿಕಾರಕ್ಕೆ ಬಂದ ನಂತರ ಕೊರೊನಾ ನಿರ್ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಕೊರೊನಾ ನಿರ್ಬಂಧಿಸಲು ತಮ್ಮ ಬಳಿ ಯೋಜನೆಯಿದೆ ಎಂದು ಅವರು ಹೇಳಿದ್ದಾರೆ. ಪಾಸಿಟಿವ್ ಪ್ರಕರಣಗಳ ಜೊತೆಗೆ, ಸಾವಿನ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿವೆ. ಸದ್ಯಕ್ಕೆ ಲಸಿಕೆ ಬರುವ ಸಾಧ್ಯತೆಯಿಲ್ಲ, ಅದು ಯಾವಾಗ ಲಭಿಸಲಿದೆ ಎಂಬುದು ಸ್ಪಷ್ಟವಾಗಿಲ್ಲ ಎಂದು ಜೋ ಬೈಡನ್ ಹೇಳಿರುವುದು ಅಮೆರಿಕಾದಲ್ಲಿನ ಕೊರೊನಾ ತೀವ್ರತೆ ಯಾವ ಮಟ್ಟದಲ್ಲಿದೆ ಎಂದು ಅರ್ಥಮಾಡಿಕೊಳ್ಳಬಹುದಾಗಿದೆ.