ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಕೋರ್ಸ್‌ ಆಯ್ಕೆ ಕುರಿತು ನೇರ ಫೋನ್‌-ಇನ್ ಕಾರ್ಯಕ್ರಮ

ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಕೋರ್ಸ್‌ ಆಯ್ಕೆ ಕುರಿತು ನೇರ ಫೋನ್‌-ಇನ್ ಕಾರ್ಯಕ್ರಮ Live phone-in program on academic career guidance and course selection

ಲೋಕದರ್ಶನ ವರದಿ 

ಬೆಳಗಾವಿ 23: ಕೆಎಲ್‌ಇ ವೇಣುಧ್ವನಿ 90.4 ಎಫ್‌. ಎಮ್‌. ಕೇಂದ್ರ ಬೆಳಗಾವಿ, ಕಾಹೇರ್ ಬೆಳಗಾವಿ  ಮತ್ತು ಕೆಎಲ್‌ಇ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯ ಬೆಳಗಾವಿ ಇವರ ಸಹಯೋಗದಲ್ಲಿ  ಗುರುವಾರ 23ನೆ ಏಪ್ರೀಲ್ 2026 ರಂದು ದ್ವಿತೀಯ ಪಿಯುಸಿ ನಂತರ ಮುಂದೇನು? ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಮತ್ತು ಕೋರ್ಸ್‌ ಆಯ್ಕೆ ಕುರಿತು ನೇರ ಫೋನ್‌-ಇನ್ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  

ಬೆಳಗಾವಿಯ ಕಾಹೇರ್‌ನ ಸ್ಕೂಲ್ ಆಫ್ ಅಲೈಡ್ ಹೇಲ್ತ್‌ ಸೈನ್ಸಸ್‌ನ ಪ್ರಾಚಾರ್ಯರು ಮತ್ತು ಡೀನ್ ಡಾ. ಉರ್ಮಿಳಾ ಕಾಗಲ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕೋರ್ಸ್‌ ಆಯ್ಕೆಗೂ ಮೊದಲು ಆಲೋಚನೆ ಅಗತ್ಯ ಎಂದು ತಿಳಿಸಿದರು. 

2ನೇ ಪಿಯುಸಿ ನಂತರ ಪದವಿ ಅಥವಾ ಯಾವುದಾದರೂ ಕೋರ್ಸ್‌ ಆಯ್ಕೆ ಮಾಡುವ ಮೊದಲು ವಿದ್ಯಾರ್ಥಿಗಳ ಆಸಕ್ತಿ ಯಾವ ವಿಷಯದಲ್ಲಿದೆ ಎಂಬುದು ಮುಖ್ಯವಾಗಿರುತ್ತದೆ. ಅವರ ಅಭಿರುಚಿಯಂತೆ ಪದವಿ ಆಯ್ಕೆ ಮಾಡಿಕೊಂಡರೆ ಮುಂದಿನ ಉಜ್ವಲ ಭವಿಷ್ಯಕ್ಕೆ ದಾರಿಯಾಗುವುದರಲ್ಲಿ ಸಂಶಯವಿಲ್ಲ, ವಿದ್ಯಾರ್ಥಿಗಳು ಪಾಲಕರ ಒತ್ತಡಕ್ಕೋ ಅಥವಾ ಮತ್ಯಾರೋ ಸಲಹೆಗೋ ಕಟ್ಟುಬಿದ್ದು ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಎಡವುದು ಸಹಜ, ಆದ್ದರಿಂದ ಈ ಹಂತದಲ್ಲಿ ಸೂಕ್ತ ಆಲೋಚನೆ ಮಾಡುವುದು ಅಗತ್ಯ ಎಂದು ಹೇಳಿದರು.  

ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಆಂಡ್ ರಿಸರ್ಚ್‌ ಬೆಳಗಾವಿಯು ಅತ್ಯುತ್ತಮ ಶ್ರೇಣಿಯ ಆರೋಗ್ಯ ವಿಜ್ಞಾನ (ಅಲೈಡ್ ಹೇಲ್ತ್‌ ಸೈನ್ಸ್‌ಸ್) ಕೋರ್ಸ್‌ಗಳನ್ನು ಪರಿಚಯಿಸಿದೆ, ಕೋರ್ಸ್‌ಗಳ ಅವಧಿ, ವಿದ್ಯಾರ್ಹತೆ, ಕೋರ್ಸ್‌ ಮುಗಿದ ನಂತರ ಉದ್ಯೋಗ ಅವಕಾಶಗಳು ಮತ್ತು ಕ್ಯಾಂಪಸ್‌ನಲ್ಲಿರುವ ಸೌಲಭ್ಯಗಳ ಕುರಿತು ಮಾಹಿತಿ ಹಂಚಿಕೊಂಡರು ಮತ್ತು ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು. ವೇಣುಧ್ವನಿಯ ಕಾರ್ಯಕ್ರಮ ನಿರ್ವಾಹಕಿ ಮನಿಷ ಪಿ. ಎಸ್‌. ಮತ್ತು ಮಂಜುನಾಥ ಪೈ ಕಾರ್ಯಕ್ರಮ ನಡೆಸಿಕೊಟ್ಟರು.