ಲೈಬೇರಿಯಾ; ಚರ್ಚ್ ನಲ್ಲಿ ಕಾಲ್ತುಳಿತ.. 29 ಸಾವು
ಮನ್ರೋವಿಯಾ, ಜ 21 ಲೈಬೀರಿಯಾದ ಪೆಂಟೆ ಕೋಸ್ಟಲ್ ಬಯಲು
ಚರ್ಚ್ ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 29 ಮಂದಿ ಭಕ್ತಾದಿಗಳು
ಮೃತಪಟ್ಟಿದ್ದಾರೆ. ಲೈಬಿರಿಯಾ ರಾಜಧಾನಿ ಮನ್ರೋವಿಯಾ ಹೊರವಲಯದ ಚರ್ಚ್
ನಲ್ಲಿ ನಡೆದ ಕಾಲ್ತುಳಿತದಲ್ಲಿ ರಾತ್ರೋ ರಾತ್ರಿ 29 ಮಂದಿ ಮೃತಪಟ್ಟಿದ್ದಾರೆ
ಎಂದು ಲೈಬೀರಿಯಾದ ಉಪ ಮಾಹಿತಿ ಸಚಿವರು ಹೇಳಿದ್ದಾರೆ.
ರಾಜಧಾನಿ ಹೊರವಲಯ ನ್ಯೂ ಕ್ರೂ ಟೌನ್ ನಲ್ಲಿ ರಾತ್ರಿ ನಡೆದ ಕ್ರಿಶ್ಚಿಯನ್
ಆರಾಧನಾ ಕಾರ್ಯಕ್ರಮದಲ್ಲಿದಲ್ಲಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ 29 ಮಂದಿ
ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು
ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ದರೋಡೆಗೆ ಯತ್ನಿಸಿದ ಸಶಸ್ತ್ರ ಗುಂಪನ್ನು
ಹಿಡಿಯುವ ಭರದಲ್ಲಿ ಈ ಕಾಲ್ತುಳಿತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು
ಹೇಳಿದ್ದಾರೆ.
ಜೋಗೋಸ್ ಎಂದು ಕರೆಯಲಾಗುವ ಲೈಬೇರಿಯನ್ ಸ್ಟ್ರೀಟ್ ಗ್ಯಾಂಗ್ ಸಣ್ಣ ಆಯುಧಗಳೊಂದಿಗೆ ದರೋಡೆಗೆ ಇಳಿದಿದ್ದೇ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ. ಲೈಬಿರಿಯಾ ಪೊಲೀಸ್ ವಕ್ತಾರ ಮೋಸೆಸ್ ಕಾರ್ಟರ್ ಘಟನೆಗೆ ಕಾರಣ ನೀಡಲು ನಿರಾಕರಿಸಿದ್ದಾರೆ. ಈ ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.