ಅಲೆಮಾರಿ ಸುಡಗಾಡ ಸಿದ್ಧ ಸಮಾಜ ಬಾಂಧವರಿಗೆ ನಿವೇಶನ ಹಕ್ಕು ಪತ್ರ
ಬೈಲಹೊಂಗಲ : ಪಟ್ಟಣದ ಇಂದಿರಾ ನಗರದ ಸಿದ್ಧರ ಕಾಲೂನಿಯಲ್ಲಿರುವ ಅಲೆಮಾರಿ ಸುಡಗಾಡ ಸಿದ್ಧ ಸಮಾಜ ಬಾಂದವರಿಗೆ ನಿವೇಶನ ಹಕ್ಕ ಪತ್ರ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ಮಟ್ಟದ ಅಲೆಮಾರಿ ಸುಡಗಾಡ ಸಿದ್ದ ಸಮಾಜ ಸೇವಾ ಸಂಘ ವತಿಯಿಂದ ಪ್ರತಿಭಟಿಸಿ ಉಪವಿಭಾಗಾಧಿಕಾರಿಗೆ ಗುರುವಾರ ಮನವಿ ಸಲ್ಲಿಸಲಾಯಿತು.
ಮುಖಂಡ ಮಾರುತಿ ಕೊಂಡೂರ ಮಾತನಾಡಿ, ಬಿಸಿಎಂ ಹಾಸ್ಟೇಲ್ ಹಿಂದೆ ಪುರಸಭೆಯ 178 ರಿ.ಸ.ನಂ.ಗೈರಾನ ಜಾಗೆಯಲ್ಲಿ ಸುಮಾರು 35 ವರ್ಷಗಳಿಂದ ಅಲೆಮಾರಿ ಸುಡಗಾಡ ಸಿದ್ದ ಸಮಾಜ ಬಾಂದವರು ವಾಸವಾಗಿದ್ದೇವೆ. ಇಲ್ಲಿಯವರೆಗೆ ಸಕರ್ಾರದ ಯಾವುದೇ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದು, ಗುಡಾರ್, ಶೆಡ್ಡಗಳಲ್ಲಿ ವಾಸವಾಗಿದ್ದೇವೆ.
ಜನರಿಗೆ ಬೆಳಕಿನ, ಕುಡಿಯುವ ನೀರಿನ, ಬೀದಿ ದೀಪ, ರಸ್ತೆ ವ್ಯವಸ್ಥೆ ಇಲ್ಲವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮನವಿಗೆ ಸ್ಪಂದಿಸಿ ಸಮಾಜ ಬಾಂದವರ ಸಂಕಷ್ಟಕ್ಕೆ ನೆರವಾಗಬೇಕು. ಕೂಡಲೇ ವಸತಿ, ಮೂಲಭೂತ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು. ಮನವಿಗೆ ಸ್ಪಂದಿಸದಿದ್ದರೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುವುದಾಗಿ ಎಚ್ಚರಿಸಿದರು.
ರಮೇಶ ಸಂಕಣ್ಣವರ, ಸಣ್ಣಮಲ್ಲಪ್ಪ ಡಕ್ಕನ್ನವರ, ಪಾಂಡುರಂಗ ಹಿಪ್ಪರಗಿ, ಬಾಳೇಶ ಡೊಂಕನ್ನವರ, ಕುಬೇರ ಕವಳೆ, ಸಾಯಿರಾಮ ಕವಳೆ ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 