ಶಿರಹಟ್ಟಿ

ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ; ಸಚಿವ ಹೆಚ್ ಕೆ. ಪಾಟೀಲ

ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ; ಸಚಿವ ಹೆಚ್ ಕೆ. ಪಾಟೀಲ

ಶಿರಹಟ್ಟಿ, 29 : ತಾಲೂಕಿನ ಮಾಗಡಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವದರ ಮುಖಾಂತರ ಅನುಕೂಲ ಮಾಡಿಕೊಡಿ ಎಂದು ಕಾನೂನು ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ. ಪಾಟೀಲ ಹೇಳಿದರು. 

ಅವರು ಶನಿವಾರ ಮಾಗಡಿ ಗ್ರಾಮದ ಅಲ್ಪಸಂಖ್ಯಾತರ ಕಾಲೋನಿಯಲ್ಲಿ 50 ಲಕ್ಷ ರೂಗಳ ಅನುದಾನದಲ್ಲಿ ನಿರ್ಮಾಣ ಮಾಡುತ್ತಿರುವ ಸಿ ಸಿ. ರಸ್ತೆ ಕಾಮಗಾರಿಗೆ ಚಾಲನೆ ನೀಡಿ, ಲಕ್ಷ್ಮೇಶ್ವರ ಪಟ್ಟಣದ ಸುಶೀಲಾ ಲಕ್ಕಪ್ಪನವರ ಅವರು ಎಂ ಎ. ಪದವಿಯಲ್ಲಿ 9 ಬಂಗಾರದ ಪದಕವನ್ನು ಪಡೆದ ವಿದ್ಯಾರ್ಥಿಗೆ ಸನ್ಮಾನಿಸಿ ಮಾತನಾಡುತ್ತಾ, ನಮ್ಮ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇದನ್ನು ಸಹಿಸಲಾಗದೇ ವಿರೋಧ ಪಕ್ಷದ ನಾಯಕರು ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಸತ್ಯಕ್ಕೆ ದೂರವಾಗಿದೆ ಎಂದು ಗುಡುಗಿದರು. 

ಈ ಸಂದರ್ಭದಲ್ಲಿ ಶಾಸಕ ಡಾ, ಚಂದ್ರು ಲಮಾಣಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಲಾರೆಪ್ಪ ಹಾದಿಮನಿ, ಉಪಾಧ್ಯಕ್ಷೆ ಕಸ್ತೂರೆವ್ವ ಚವಡಿ, ಹುಮಾಯೂನ್ ಮಾಗಡಿ, ವೀರಯ್ಯ ಮಠಮತಿ, ವೀರಣ್ಣ ಅಂಗಡಿ, ಬಸವರಾಜ ಪಲ್ಲೇದ, ಹನುಮಂತ ಬಾಲರೆಡ್ಡಿ, ವಾಯ್ ಡಿ. ಪಾಟೀಲ, ಚಂದ್ರು ಶೆಟ್ರಡ್ಡಿ, ಮುದಕಣ್ಣ ಸಾಸಳ್ಳಿ, ಫಕ್ಕೀರೇಶ ಮ್ಯಾಟಣ್ಣವರ, ಫಕ್ಕೀರೇಶ ನಡುವಿನಕೇರಿ, ವಿರೇಂದ್ರ ಪಾಟೀಲ, ತಿಪ್ಪಣ್ಣ ಸಂಶಿ, ಚನ್ನಪ್ಪ ಜಗಲಿ, ಬುಡ್ನೇಸಾಬ ಬುವಾಜಿ, ಜುಂಜಪ್ಪ ಮುದಿಯಮ್ಮನವರ, ರಾಜು ಮಡಿವಾಳರ, ಲೊಕೂಸಾಬ ನಧಾಫ್, ಸಂಜೀವ ವೆಂಕರಡ್ಡಿ, ಪ್ರಕಾಶ ಹೋರಿ, ವಕೀಲ ಚವಡಿ, ಲಲಿತಾ ಪಾಟೀಲ,  ಡಿ ಆರ್‌. ಕೆಂಚಕ್ಕನವರ, ಪವನ ಈಳಗೇರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು. 


ಸುದ್ದಿ ಓದಿ