ಪ್ರತಿಯೊಬ್ಬ ಗ್ರಾಮೀಣ ಜನರು ವಿದ್ಯಾವಂತರಾಗಲಿ: ಗುಡಗನಟ್ಟಿ
ಉಗರಗೋಳ 21: ಭಾರತ ಹಳ್ಳಿಗಳಿಂದ ಕೂಡಿದ ದೇಶ. ಇಂತಹ ಸಮೃದ್ಧ ದೇಶದಲ್ಲಿ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ನಾಗರಿಕರು ಅನಕ್ಷರಾಗದೆ, ಪ್ರತಿ ಕುಟುಂಬ ವಿದ್ಯಾವಂತರಾಗಿ ಆರ್ಥಿಕವಾಗಿ ಸಬಲರಾಗಿ, ಬಡತನದ ಬೇಗೆಯಿಂದ ಮುಕ್ತಿಹೊಂದಿ ಎಂದು ಸವದತ್ತಿ ಪಿಎಸ್ಆಯ್ ಶಿವಾನಂದ ಗುಡಗನಟ್ಟಿ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಸಭಾ ಮಂಟಪದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ ಸವದತ್ತಿ, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ, ಹಾಗೂ ಸಮಸ್ತ ಗ್ರಾಮಸ್ಥರು ಉಗರಗೋಳ, ಡಾ, ಡಿ ವೀರೆಂದ್ರ ಹೆಗ್ಗಡೆಯವರ ಹಾಗೂ ಮಾತೋಶ್ರೀ ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದೊಂದಿಗೆ ಜರಗುವ ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಪ್ರತಿಯೊಬ್ಬ ಯುವಕರು ದುಶ್ಚಟಗಳಿಗೆ ಮಾರು ಹೋಗದೇ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು ನೊಂದವರ ಕಣ್ಣೀರನ್ನು ಒರೆಸುವತ್ತ ಸಾಗಬೇಕೆಂದು ಕರೆ ನೀಡಿದರು.
ಉಗರಗೋಳ ನಿರ್ವಾಣೇಶ್ವರಮಠದ ಶ್ರೀಗುರು ಮಹಾಂತಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷೆ ಜುಬೇದಾ ಬಾರಿಗಿಡದ, ಗೋಕಾಕ ವಿಭಾಗದ ಜಿಲ್ಲಾ ನಿದೆೇರ್ಶಕ ಕೇಶವ ದೇವಾಂಗ, ಗ್ರಾಪಂ ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ಗ್ರಾಪಂ ಸರ್ವ ಸದಸ್ಯರು, ಕೆ ಎಸ್ ಗಂದಿಗೌಡ್ರ ಎಸ್ ಕೆ ಗೂಡರಾಶಿ, ವಾಯ್ ವಾಯ್ ಕಾಳಪ್ಪನವರ, ರಾಜು ಪಾಟೀಲ, ರೇಣುಕಾ ಶಿದ್ದಕ್ಕನವರ, ಮಂಜುಳಾ ಕುಂಟೋಜಿ, ರೋಷನಬಿ ಹೂಲಿ, ರಾಮು ಕಾಳಪ್ಪನವರ, ರಾಜು ಬಾರಿಗಿಡದ, ಪರಶುರಾಮ ಇಮ್ರಾಪೂರ, ವಿಠಲ ಶಿದ್ದಕ್ಕನವರ, ರೇಣಪ್ಪ ಬಜಂತ್ರಿ, ಪರಸನಗೌಡ ಪೊಲೇಶಿ, ಎಮ್ ಕಾಳಪ್ಪನವರ, ನಜೀರಸಾಬ ಬಾರಿಗಿಡದ, ಹಾಗೂ ಗ್ರಾಮಸ್ಥರು ಇದ್ದರು.
ವಿಜಯಾ ಬಾರ್ಕಿ ಸ್ವಾಗತಿಸಿದರು. ಗಣೇಶ ನಿರೂಪಿಸಿ, ಶಂಕ್ರೇಮ್ಮಾ ಮುದ್ದರಗಣಿ ವಂದಿಸಿದರು.