ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳು ಎಲ್ಲ ಅರ್ಹ ಫಲಾನುಭವಿಗಳಿಗೆ ತಲುಪಲಿ: ವೀರಯ್ಯ ಮಠಪತಿ
ಶಿರಹಟ್ಟಿ, 31: ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟ ಕಡೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳ ಪಾತ್ರ ಮುಖ್ಯವಾಗಿದೆ ಎಂದು ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ವೀರಯ್ಯ ಮಠಪತಿ ತಾಲೂಕ ಮಟ್ಟದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಅವರು ಪಟ್ಟಣದ ತಾಲೂಕ ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಜರುಗಿದ ಗ್ಯಾರಂಟಿ ಯೋಜನೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿಗಳಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳಿಂದ ಸರ್ವ ಫಲಾನುಭವಿಗಳ ಸವಿವರಗಳನ್ನು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವೀರಯ್ಯ ಮಠಪತಿ ಅವರು ಒಟ್ಟು ಫಲಾನುಭವಿಗಳ ಮಾಹಿತಿ ಪಡೆದುಕೊಂಡರು.
ಇಲಾಖೆ ಅವರು ಮಾಹಿತಿ ಪಡೆಯುವಾಗ ಅಧಿಕಾರಿಗಳೊಂದಿಗೆ ತಾಲೂಕ ಕುರುಬ ಸಮಾಜದ ಅಧ್ಯಕ್ಷ ಹಾಗೂ ಗ್ಯಾರಂಟಿ ಯೋಜನೆಯ ಸದಸ್ಯರಾದ ಹೊನ್ನಪ್ಪ ಪೋಟಿ, ಸೋಮನಗೌಡ ಮರಿಗೌಡ್ರ, ಶಿವನಗೌಡ ಪಾಟೀಲ, ದೇವಪ್ಪ ಲಮಾಣಿ, ಬುಡನಶ್ಯಾ ಮಕಾನದಾರ ಮಾತನಾಡಿ, ತಾಲೂಕಿನಾದ್ಯಂತ ಈ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಫಲಾನುಭವಿಗಳು ಬಾಕಿ ಉಳಿಯಬಾರದು ಹಾಗೂ ಬಾಕಿ ಉಳಿದಿದ್ದರೆ ಆ ಉಳಿದ ಫಲಾನುಭವಿಗಳನ್ನು ಈ ಯೋಜನೆಯಲ್ಲಿ ಸೇರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಎಸ್ ಎಸ್. ಕಲ್ಮನಿ, ಗ್ಯಾರಂಟಿ ಸಮಿತಿಯ ಸದಸ್ಯರುಗಳಾದ ಮಲ್ಲಪ್ಪ ಹುಯಿಲಗೋಳ, ಹಸನಗೌಡ ಪಾಟೀಲ, ಸಿಡಿಪಿಓ ಮೃತ್ಯುಂಜಯ ಗುಡ್ಡದ್ದಾನ್ವೇರಿ, ಆಹಾರ ಇಲಾಖೆ ಅಧಿಕಾರಿ ಮಂಜುಳಾ ಆಕಳದ, ಸಾರಿಗೆ ಇಲಾಖೆಯ ಅಧಿಕಾರಿ, ಹೆಸ್ಕಾಂ ಅಧಿಕಾರಿಗಳು ಸೇರಿದಂತೆ ಇನ್ನು ಅನೇಕರು ಇದ್ದರು.