ಶಿರಹಟ್ಟಿ

ಕನಕದಾಸರ ಜಯಂತಿ ಎಲ್ಲರೂ ಸೇರಿ ಅದ್ಧೂರಿಯಾಗಿ ಆಚರಿಸೋಣ

ಕನಕದಾಸರ ಜಯಂತಿ ಎಲ್ಲರೂ ಸೇರಿ ಅದ್ಧೂರಿಯಾಗಿ ಆಚರಿಸೋಣ

ಶಿರಹಟ್ಟಿ 23:  ಸಮುದಾಯ ಸಂಘಟನೆಗಳ ಸಹಕಾರವನ್ನು ಪಡೆದುಕೊಂಡು ತಾಲೂಕು ಆಡಳಿತದ ವತಿಯಿಂದ ಸಂತ ಶ್ರೇಷ್ಠ ಕವಿ ಭಕ್ತ ಕನಕದಾಸರ ಜನ್ಮ ದಿನಾಚರಣೆಯನ್ನು ಸಾಂಪ್ರಾದಾಯಿಕವಾಗಿ ಆಚರಣೆ ಮಾಡಲು ತಾಲೂಕಾಡಳಿತ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಪೂರ್ವಸಿದ್ಧತಾ ಸಭೆಯಲ್ಲಿ ತಹಸಿಲ್ದಾರ ಅನಿಲ ಬಡಿಗೇರ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ನಂತರ ತಾಲೂಕು ಕುರುಬರ ಸಂಘದ ಅಧ್ಯಕ್ಷ ಹೊನ್ನಪ್ಪ ಪೋಟಿ ಮಾತನಾಡಿ, ಈ ಬಾರಿ ಇದೇ ತಿಂಗಳು 30 ರಂದು ನಡೆಯುವ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅನಾನುಕೂಲ ಆಗದ ಹಾಗೆ ಹಾಲುಮತ ಸಮಾಜ ಹಾಗೂ ಸರ್ವ ಜನಾಂಗದವರು ಜೊತೆಗೆ ತಾಲೂಕ ಆಡಳಿತದ ಎಲ್ಲ ಇಲಾಖೆಯವರು ಸೇರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಬೇಕು ಎಂದು ತಹಸೀಲ್ದಾರರಿಗೆ ಮನವಿ ಮಾಡಿದರು. 

ಕುರುಬ ಸಮಾಜದ ಮಾಜಿ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಹಾಲಿ ಸದಸ್ಯರಾದ ಮಂಜುನಾಥ ಗಂಟೆ ಮಾತನಾಡಿ, ದಿನಾಂಕ 30 ರಂದು ನಡೆಯುವ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ತಾಲೂಕ್ ಆಡಳಿತ ಕಚೇರಿಯಿಂದ ಪ್ರಾರಂಭವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿ, ಭಕ್ತ ಕನಕದಾಸರ ವೃತ್ತಕ್ಕೆ ಬಂದು ಸೇರಬೇಕು, ಮೆರವಣಿಗೆ ಕಾರ್ಯಕ್ರಮದಲ್ಲಿ ತಾಲೂಕ ಆಡಳಿತ, ಹಾಲುಮತ ಸಮಾಜ ಹಾಗೂ ಸಕಲ ಧರ್ಮದ ಗುರುಹಿರಿಯರು ಯುವಕರೆಲ್ಲ ಸೇರಿ ಅದ್ದೂರಿಯಾಗಿ ಆಚರಿಸೋಣ ಎಂದರು,  

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂತೋಷ ಕುರಿ ಮಾತನಾಡಿ, ಅಂದು ನಡೆಯುವ ಮೆರವಣಿಗೆಯಲ್ಲಿ ಶಿಕ್ಷಣ ಇಲಾಖೆಯ ಸಹಭಾಗಿತ್ವ ಮುಖ್ಯವಾಗಿದ್ದು, ಆ ಕಾರ್ಯಕ್ರಮದ ಮೆರವಣಿಗೆಯಲ್ಲಿ ಮಹಾನ್ ದಾರ್ಶನಿಕರ ವೇಷ ಭೂಷಣಗಳನ್ನು ಹಾಗೂ ಅನೇಕ ಮಹನೀಯರ ಪಾತ್ರದಲ್ಲಿ ಕಾಣಿಸುವಂತೆ ಮಕ್ಕಳನ್ನು ತಯಾರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ ಎಮ್ ಮುಂದಿನಮನಿಯವರಿಗೆ ಮನವಿ ಮಾಡಿದರು. 

ಇನ್ನೋರ್ವ ಮಾಜಿ ಅಧ್ಯಕ್ಷ ದೇವಪ್ಪ ಬಟ್ಟೂರ ಮಾತನಾಡಿ, ಅಂದು ನಡೆಯುವ ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು. 

ನ್ಯಾಯವಾದಿ ಹೇಮಂತ ಕೆಂಗೊಂಡ ಮಾತನಾಡಿ, ಈ ಪೂರ್ವಭಾವಿ ಸಭೆಯಲ್ಲಿ ಎಲ್ಲ ಇಲಾಖೆಗಳ ಅಧಿಕೃತ ಅಧಿಕಾರಿಗಳು ಹಾಜರಾಗದೆ ಇರುವುದು ಬೇಸರ, ಆದರೆ ಭಕ್ತ ಕನಕದಾಸರ ಜಯಂತಿ ಎಂದು ತಾಲೂಕ ಆಡಳಿತದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಉಪಸ್ಥಿತರಿರಲು ತಮ್ಮ ಕಡೆಯಿಂದ ಸೂಕ್ತ ನೋಟಿಸ್ ಅನ್ನು ಹೊರಡಿಸಿ ಎಂದು ತಹಶೀಲ್ದಾರರಿಗೆ ಮನವಿ ಮಾಡಿಕೊಂಡರು. 

ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ ನಿಂಗಪ್ಪ ಓಲೆಕಾರ, ಎಲ್ಲ ಇಲಾಖೆಗಳ ಅಧಿಕಾರಿಗಳು ಕಡ್ಡಾಯವಾಗಿ ಅಂದು ನಡೆಯುವ ಜಯಂತಿಯಲ್ಲಿ ಹಾಜರಿರಬೇಕೆಂದು ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ತಾಲೂಕ ಕುರುಬರ ಸಂಘದ ಕಾರ್ಯದರ್ಶಿ ಆನಂದ ಮಾಳೆಕೊಪ್ಪ, ಜಗದೀಶ್ ಇಟ್ಟೆಕಾರ, ಪ್ರಕಾಶ ಹೋರಿ, ಪರಶುರಾಮ ಡೊಂಕಬಳ್ಳಿ, ಬಸವರಾಜ ಕಂಬಳಿ, ಮಲ್ಲಪ್ಪ ಕೌಜಗೇರಿ, ಮೈಲಾರಪ್ಪ ಮರುಡಜ್ಜನವರ, ಬಸವರಾಜ ಸಂಕದಾಳ, ಶಂಕ್ರಪ್ಪ ಸುಗ್ನಳ್ಳಿ ಹನುಮಂತ ಗೊಜನೂರ, ಇಲಾಖೆಯ ಅಧಿಕಾರಿಗಳಾದ  ಮರಿಗೌಡ ಸುರಕೋಡ, ಕೌಶಿಕ್ ದಳವಾಯಿ, ಸುರೇಶ ಕುಂಬಾರ, ದ ವಿರೂಪಾಕ್ಷ ಪಾಟೀಲ್, ಏ ಎಸ್ ಐ ಬಾರಿಗಡದ, ಕೃಷಿ ಇಲಾಖೆ ಪಿಡಬ್ಲ್ಯೂಡಿ ಹೆಸ್ಕಾಂ ಇನ್ನು ಹಲವಾರು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ