ಕಾನೂನು ರಕ್ಷಣೆ ನಮ್ಮೆಲ್ಲರ ಹಕ್ಕು : ಚಂದ್ರಶೇಖರ್ ದಿಡ್ಡಿ
Legal protection is our right: Chandrashekhar Diddi
ಬಾಗಲಕೋಟ 30 : ಸ್ಪರ್ಧಾತ್ಮಕ ಪರೀಕ್ಷೆಗಾಗಿ ಒಳ್ಳೆಯ ಪುಸ್ತಕಗಳನ್ನು ಆಯ್ಕೆ ಮಾಡಿ. ಪ್ರಚಲಿತ ವರ್ತಮಾನದ ಬಗ್ಗೆ ದೃಶ್ಯ ಮಾಧ್ಯಮವನ್ನು ಸಂಪರ್ಕಿಸುವುದು ಮುಖ್ಯ ಎಂದು ಬಾಗಲಕೋಟೆಯ ಜಿಲ್ಲಾ ಕಾನೂನು ಸೇವೆಗಳ ಹಿರಿಯ ನ್ಯಾಯಾಧೀಶರಾದ ಚಂದ್ರಶೇಖರ್ ದಿಡ್ಡಿ ಹೇಳಿದರು.
ನಗರದ ಬಿವ್ಹಿವ್ಹಿ ಸಂಘದ ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಪರೀಕ್ಷೆಯ ಸಲುವಾಗಿ ಸಾಮಾನ್ಯ ಜ್ಞಾನಕ್ಕಾಗಿ ಪತ್ರಿಕೆ ಓದಬೇಕು. ಸಾರ್ವಜನಿಕ ಸರ್ಕಾರಿ ಗ್ರಂಥಾಲಯದಲ್ಲಿ ಪತ್ರಿಕೆ ಓದುವುದರಿಂದ ಪ್ರಪಂಚಜ್ಞಾನ, ವಿಷಯಗಳ ಅರಿವು, ಸ್ಪರ್ಧಾತ್ಮಕ ವಿಷಯಗಳನ್ನು ತಿಳಿಯಬಹುದು. ಭಾಷೆಯನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಯ ಬಗ್ಗೆ ಅನುವಾದಿಸಬೇಕು. ಭಾರತದ ಸರ್ವೋಚ್ಚ ನ್ಯಾಯಾಲಯದ ಐದು ಯೋಜನೆಗಳಾದ ಆಶಾ ಯೋಜನೆ, ಡಾನ್ ಯೋಜನೆ, ಸಾತಿ ಯೋಜನೆ, ಜಾಗೃತಿ ಯೋಜನೆ, ಸಂವಾದ ಯೋಜನೆ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಿದರು. ಸತತ ಪ್ರಯತ್ನ ಮಾಡಿ ನಿಮ್ಮ ಗುರಿಯನ್ನು ಮುಟ್ಟಿ ಎಂದರು.
ಕಾರ್ಯಕ್ರಮದಲ್ಲಿ ಪ್ರಕಾಶ್ ಮಾಳೆದ ಪ್ರಧಾನ ಕಾನೂನು ಅಭಿರಕ್ಷಕರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟ ಮಾತನಾಡಿ 53 ತಿದ್ದುಪಡಿಯ ಸಂವಿಧಾನದ ರಚನೆ ಅದರ ಕರ್ತವ್ಯ, ರಾಷ್ಟ್ರದ ಬಗ್ಗೆ ಅಭಿಮಾನ, ರಾಷ್ಟ್ರಗೀತೆ ರಾಷ್ಟ್ರಧ್ವಜದ ಬಗ್ಗೆ ಗೌರವ ಮತ್ತು ಅರಣ್ಯ ಸಂರಕ್ಷಣೆ, ಕಡ್ಡಾಯ ಶಿಕ್ಷಣದ ಕುರಿತು ಕಾನೂನು ಅರಿವು ನ್ಯಾಯಾಂಗದ ಬಗ್ಗೆ ಜನರಿಗೆ ಮಾಹಿತಿಯನ್ನು ಒದಗಿಸಬೇಕು. ಇಂದಿನ ಕಾನೂನು ಸೇವಾ ಪ್ರಾಧಿಕಾರ ಕೆಲವು ಸಮಸ್ಯೆಗಳಿಗೆ ಉಚಿತವಾಗಿ ಮಕ್ಕಳಿಗೆ ಮಾಹಿತಿಯನ್ನು ನೀಡಿ ಮಕ್ಕಳ ರಕ್ಷಣೆಗೋಸ್ಕರ ಮಾಡಿದ ಪೋಕ್ಸೋ ಕಾಯ್ದೆ ಅರಿವು ಮೂಡಿಸಬೇಕು. ಮೊಬೈಲ್ ಗಳನ್ನು ಒಳ್ಳೆಯ ವಿಷಯಕ್ಕೆ ಬಳಸಿ, ಹೊರತು ಅವಲಂಬಿತರಾಗಬೇಡಿ. ಹಾಗೆಯೇ ಆಸ್ತಿಯಲ್ಲಿ ಗಂಡು, ಹೆಣ್ಣಿಗೆ ಸಮಾನವಾದ ಹಕ್ಕಿದೆ. ಅದು ಬಾಂಧವ್ಯವನ್ನು ಕಾಪಾಡಬೇಕು ಎನ್ನುವ ಕಾರಣಕ್ಕೆ ಈ ಸಮಾನವಾದ ಹಕ್ಕನ್ನು ಜಾರಿಗೆ ತಂದರು. ಸಮಾಜದಲ್ಲಿ ನಾವು ಒಳ್ಳೆಯ ರೀತಿಯಲ್ಲಿ ಬದುಕಬೇಕಾದ ಕಾನೂನು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ.ಎನ್, ಹೆಚ್, ಬೇವಿನಹಳ್ಳಿ ಅವರು ಮಾತನಾಡಿ ಸಂವಿಧಾನಕ್ಕೆ ಯಾವಾಗಲೂ ತಲೆತಗ್ಗಿಸಬೇಕು. ಯಾವಾಗಲೂ ಕಾನೂನು ರಕ್ಷಣೆ ಬಗ್ಗೆ ಜಾಗೃತವಾಗಿರಿ. ಗೌರವನ್ನು ಕೊಡುವುದರ ಜೊತೆಗೆ ಪ್ರಾಮಾಣಿಕತೆಯಲ್ಲಿ ನಮ್ಮ ಜೀವನವನ್ನು ನಡೆಸಿದಾಗ ಮಾತ್ರ ನಾವು ನಮ್ಮ ಗುರಿಯನ್ನು ಹೊಂದಲು ಸಾಧ್ಯ. ತಂದೆ ತಾಯಿಗಳು ಮಕ್ಕಳ ಮೇಲೆ ಅಪಾರ ವಿಶ್ವಾಸವನ್ನು ಹೊಂದಿರುತ್ತಾರೆ. ಆ ವಿಶ್ವಾಸ ಹುಸಿಯಾಗದಂತೆ ನಡೆದುಕೊಳ್ಳಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಎಸ್.ಎನ್.ಮಂಕಣಿ, ಆರ್,ಆರ್,ರಡ್ಡೇರ, ಜಿ,ಎಚ್, ಜಗಳೂರ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 