ಚುನಾವಣಾ ಅಕ್ರಮ- ಮೋಸದ ವಿರುದ್ಧ ಕಾನೂನು ಹೋರಾಟ: ಟ್ರಂಪ್
ವಾಷಿಂಗ್ಟನ್,
ನವೆಂಬರ್ 24: 2020 ರ ಅಧ್ಯಕ್ಷೀಯ ಚುನಾವಣೆಯ
ಫಲಿತಾಂಶಗಳನ್ನು ಅಮೆರಿಕದ ಕೆಲವು ರಾಜ್ಯಗಳು ಪ್ರಮಾಣೀಕರಿಸಿದ್ದರೂ , ಟ್ರಂಪ್ ಅಭಿಯಾನವು ಬೃಹತ್ ಚುನಾವಣಾ
ವಂಚನೆ ಮತ್ತು ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾನೂನು ಹೋರಾಟ ಮುಂದುವರಿಸುವುದಾಗಿ ಎಂದು ಟ್ರಂಪ್ ಕಾನೂನು ತಂಡದ ಹಿರಿಯ ಸಲಹೆಗಾರ ಜೆನ್ನಾ
ಎಲ್ಲಿಸ್ ತಿಳಿಸಿದ್ದಾರೆ.
"ರಾಜ್ಯ ಅಧಿಕಾರಿಗಳ ಪ್ರಮಾಣೀಕರಣವು ಕೇವಲ ಕಾರ್ಯವಿಧಾನದ ಹಂತವಾಗಿದೆ" ಎಂದು ಎಲ್ಲಿಸ್ ಹೇಳಿದ್ದಾರೆ. "ನಾವು ಎಲ್ಲಾ ಕಾನೂನು ಮತಗಳನ್ನು ಎಣಿಸಲು ಹೋರಾಡುತ್ತಿದ್ದು ದೇಶಾದ್ಯಂತ ಚುನಾವಣಾ ವಂಚನೆ, ಅಕ್ರಮ ಎದುರಿಸಲು ಹೋರಾಟ ಮಾಡುತ್ತೇವೆ ಅಂತಿಮ ಫಲಿತಾಂಶಗಳು ನ್ಯಾಯಯುತ ಮತ್ತು ನ್ಯಾಯಸಮ್ಮತವೆಂದು ಪ್ರತಿಯೊಬ್ಬ ಅಮೆರಿಕನ್ನರಿಗೆ ಭರವಸೆ ನೀಡಬೇಕು. ಎಂದೂ ಅವರು ಆಗ್ರಹ ಪಡಿಸಿದ್ದಾರೆ.