ಕನ್ನಡ ರಾಜ್ಯೋತ್ಸವದ ಅಂಗವಾಗಿ ಉಪನ್ಯಾಸ
ಜಮಖಂಡಿ 04: ತಾಲೂಕಿನ ಹುನ್ನೂರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ ಎಸ್ ಘಟಕ, ಸಾಂಸ್ಕೃತಿಕ ವಿಭಾಗ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉಪನ್ಯಾಸಕರಾಗಿ ತೇರದಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜ ಅಧ್ಯಾಪಕ ಪ್ರೊ. ಆರ್.ವ್ಹಿ.ಕಡಪಟ್ಟಿ ಮಾತನಾಡಿ, ಕನ್ನಡ ನಾಡು ನುಡಿ ಬಗೆಗೆ ನಾವು ಹೆಮ್ಮೆ ಬೆಳೆಸಿ ಕೊಳ್ಳಬೇಕು. ನಮಗೆ ರಾಷ್ಟ್ರಕವಿ ಕುವೆಂಪು ಮಾದರಿಯಾಗಬೇಕು. ಅವರು ಇಂಗ್ಲೀಷ ಭಾಷೆಯಲ್ಲಿ ಪ್ರಾವಿಣ್ಯತೆ ಹೊಂದಿದ್ದರೂ ಮಾತೃಭಾಷೆ ಕನ್ನಡದಲ್ಲಿ ಬರೆಯುವ ಮುಖಾಂತರ ಕನ್ನಡ ಭಾಷೆಯ ಮೇಲಿನ ಪ್ರೀತಿ ಗೌರವ ತೋರಿಸಿ ಕೊಡು ಕನ್ನಡ ಭಾಷೆಯನ್ನು ವಿಶ್ವದಾದ್ಯಂತ ಪಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾಥರ್ಿನಿ ಶ್ರೀನೀಧಿ ಕೌಜಲಗಿ,ಪ್ರಾಧ್ಯಾಪಕ ಡಾ.ವ್ಹಿ.ಆರ್.ದಳವಾಯಿ,ಕನ್ನಡ ಪ್ರಾಧ್ಯಾಪಕಿ ಡಾ.ಅಶ್ವೀನಿ ಬಬಲಿ ಕನ್ನಡ ನಾಡುನುಡಿ ಬಗ್ಗೆ ಮಾತನಾಡಿದರು.ಪ್ರಾಂಶು ಪಾಲೆ ಡಾ.ಸುನಂದಾ ಎಸ್.ಶಿರೂ ಮಾತನಾಡಿ, ಕನ್ನಡ ಭಾಷೆಯನ್ನು ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.ಪ್ರತಿನಿತ್ಯ ನಾವು ಸ್ಪಷ್ಟವಾದ ಕನ್ನಡವನ್ನು ಹೆಮ್ಮೆಯಿಂದ ಬಳಸುವುದು ಮುಖ್ಯವಾಗಿದೆಂದು ಹೇಳಿದರು.
ಪ್ರೋ.ಎಸ್.ಎಸ್.ಹಳೇಮನಿ, ಡಾ.ವೀಣಾ ಮರಕಟ್ಟಿ, ಭಾರತಿ ಜಮಖಂಡಿ, ಸುನಂದಾ ಹಡಪದ, ಬಸವರಾಜ ಹುಣಶಿಕಟ್ಟಿ, ಬಿ.ವ್ಹಿ. ವಜ್ಜರಮಟ್ಟಿ ಉಪಸ್ಥಿತರಿದ್ದರು. ಎ.ಎಲ್. ತೇರದಾಳ ಸ್ವಾಗತಿಸಿದರು. ಡಾ.ಬನಶಂಕರಯ್ಯ ವಂದಿಸಿದರು. ಪಿ. ಜೈಪ್ರಕಾಶ ನಿರೂಪಿಸಿದರು.