ಮೂಢ ನಂಬಿಕೆ ಬಿಟ್ಟು ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ
ಉಗರಗೋಳ 31: ಪ್ರತಿ ಹಳ್ಳಿ ಹಳ್ಳಿಗಳ ಜನರು ಯಾವೂದೇ ಮೂಢ ನಂಬಿಕೆಗೆ ಒಳಗಾಗದೆ, 5 ವರ್ಷ ಒಳಗಿನ ಪ್ರತಿಯೊಂದು ಮಗುವಿಗೆ ಪಲ್ಸ್‍ಪೋಲಿಯೋ 2 ಹನಿ ಲಸಿಕೆಯನ್ನು ಹಾಕಿಸಿ ಎಂದು ಶಿಕ್ಷಕಿ ಕೆ ಆರ್ ರಾಟಿಯವರ ಹೇಳಿದರು.
ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಶ್ರೀಕಲ್ಮೇಶ್ವರ ದೇವಸ್ಥಾನದಲ್ಲಿ ಪಲ್ಸ್‍ಪೋಲಿಯೋ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು
ವಿ.ಎಂ.ಮಾಗುಂಡ, ಎಂ.ವಿ. ಹುಬ್ಬಳ್ಳಿಕದಂ, ಎಂ.ಎಸ್. ಶಿಂಧೆ, ಎಸ್.ಎಂ. ಪಾಟೀಲ, ಸ್ಪರ್ಧಾ ಪಾಟೀಲ ಹಾಗೂ ಆರೋಗ್ಯೆ ಕೇಂದ್ರದ ಸಿಬ್ಬಂದಿ ಮತ್ತು ಗ್ರಾಮಸ್ಥರು ಇದ್ದರು.