ಯಾದವಾಡದ ಕಾಯಕ ಜೀವಿ ಲಕ್ಷ್ಮಣ್ ಇತಾಪಿ ನಿಧನ
ಮೂಡಲಗಿ 06: ತಾಲ್ಲೂಕಿನ ಯಾದವಾಡದ ಹಿರಿಯ ಕಾಯಕ ಜೀವಿ, ಪ್ರಗತಿಪರ ರೈತ ಲಕ್ಷ್ಮಣ್ ತುಕಾರಾಮ್ ಇತಾಪಿ (75) ಅವರು ಶನಿವಾರ ರಾತ್ರಿ 7-10ಕ್ಕೆ ನಿಧನರಾದರು.
ಮೂಲತ: ಟೇಲರಿಂಗ್, ಬಟ್ಟೆ ವ್ಯಾಪಾರಿ ಹಾಗೂ ಇನ್ನಿತರ ವಹಿವಾಟುಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೇ ಸಿಮೆಂಟ್ ಏಜೆನ್ಸಿಯನ್ನೂ ಹಾಗೂ ಫರಸಿಗಳ ಮಾರಾಟವನ್ನು ಅವರು ಮಾಡುತ್ತಿದ್ದರು.ತುಕಾರಾಂ ಮತ್ತು ಚಂದ್ರಬಾಯಿ ದಂಪತಿ ಮೂವರ ಪುತ್ರರು, ನಾಲ್ವರು ಪುತ್ರಿಯರಲ್ಲಿ ಲಕ್ಷ್ಮಣ್ ಅವರು ಎರಡನೇ ಪುತ್ರ. ಪತ್ನಿ ಮೀನಾಕ್ಷ್ಮೀ, ಪುತ್ರರಾದ ಜಯರಾಮ್, ರವಿ, ಪುತ್ರಿಯರಾದ ರಾಜೇಶ್ವರಿ, ಮಹೇಶ್ವರಿ, ಸಹೋದರ ಆತ್ಮಾರಾಂ ಅವರೂ ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಅಕ್ಟೋಬರ್ 6ರಂದು ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ಸ್ವಗ್ರಾಮದ ರುದ್ರಭೂಮಿಯಲ್ಲಿ ನೆರವೇರಿತು.
ದಿ. ಲಕ್ಷ್ಮಣ್ ಇತಾಪಿ ಅವರ ನಿಧನಕ್ಕೆ ಹಿರಿಯರಾದ ಈಶ್ವರ್ ಕತ್ತಿ, ಮುಖ್ಯ ಗುರುಗಳಾದ ಮಲ್ಲಿಕಾರ್ಜುನ್ ಹುಲಗಬಾಳಿ, ನಿವೃತ್ತ ಶಿಕ್ಷಕ ಪ್ರಲ್ಹಾದ್ ಎಂ. ದೇಶಪಾಂಡೆ, ಶ್ರೇಯಾ ಅಡಿವೆಪ್ಪ ಗೊಡಚಿ, ಮಲ್ಲಿಕಾರ್ಜುನ್ ಅಥಣಿ, ಲಕ್ಷ್ಮಣ್ ಮಂಟೂರ್, ಬಸವರಾಜ್ ಎಸ್. ಕಲ್ಯಾಣಿ, ಸಿದ್ದಯ್ಯ ಹಿರೇಮಠ್, ಬಿ.ಎಂ. ನ್ಯಾಮಗೌಡರ್, ಶಿವಪ್ಪ ನ್ಯಾಮಗೌಡರ್, ಧರ್ಮರಾಜ್, ಅಪ್ಪಣ್ಣ ಚಿಕ್ಕಲಗೌಡರ್, ಶಂಕರ್ ಹುಗ್ಗಿ, ಶಿವಪುತ್ರ್ಪ ಕಂಟಿಗಾಂವಿ, ವಿ.ಐ. ಬೆಣಗಿ, ಅಶೋಕ್ ಮಹಾಲಿಂಗಪೂರ್, ಬಸವರಾಜ್ ಅ. ಚಿನಿವಾರ್, ಧರ್ಮಣ್ಣ ಚಿಪ್ಪಲಕಟ್ಟಿ, ಮಾಜಿ ಸೈನಿಕ ಚರಂತಯ್ಯ ಮಳ್ಳಿಮಠ್, ಸೋಮು ಕತ್ತಿ, ಸುರೇಶ್ ಒಣಕಿ, ಸವಿತಾ ಶೆಟ್ಟರ್, ಬಿ.ಆರ್. ಮೋಮಿನ್, ನಾಗಪ್ಪ ಕುಬುಸದ್, ಗಣೇಶ್, ಅಶೋಕ್ ರೂಢಗಿ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ.