ತುಂಬು ಗರ್ಭಿಣಿ ಹತ್ಯೆ ಮಾಡಿದ ನ್ಯಾಯವಾದಿ
Lawyer who murdered a pregnant wife
ಕಾಗವಾಡ 09: ತಾಲೂಕಿನ ಉಗಾರ ಬುದ್ರುಕ್ ಗ್ರಾಮದ ಗರ್ಭಿಣಿ ಮಹಿಳೆ ಚೈತಾಲಿ ಪ್ರದೀಪ ಕಿರಣಗಿ (22)ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಗಂಡನೆ ಹತ್ಯೆ ಮಾಡಿರುವುದಾಗಿ ಚೈತಾಲಿ ತಂದೆ ಅಣ್ಣಾಸಾಬ ಮಾಳಿ ಕಾಗವಾಡ ಠಾಣೆಗೆ ದೂರು ನೀಡಿದ್ದಾರೆ.
ಪ್ರದೀಪ ಹಾಗೂ ಚೈತಾಲಿ ಒಂದೇ ಗ್ರಾಮದವರು, ಸುಮಾರು ವರ್ಷ ಪ್ರೀತಿಸಿ ಮದುವೆಯಾಗಿದ್ದರು. ಚೈತಾಲಿ ಏಳು ತಿಂಗಳ ತುಂಬು ಗರ್ಭಿಣಿಯಾಗಿದ್ದಳು. ಗಂಡನ ಮನೆಯಲ್ಲಿ ಕಿರುಕುಳ ಹಾಗೂ ನಿನ್ನನ್ನು ಕೊಲೆ ಮಾಡುವುದಾಗಿ ಪದೇ-ಪದೇ ಪ್ರದೀಪ ಹೇಳುತ್ತಿದ್ದನ್ನು ಎಂದು ನಮ್ಮ ಮುಂದೆ ಹೇಳಿದ್ದಳು ಎಂದು ಪೋಷಕರು ತಿಳಸಿದ್ದಾರೆ.
ಮೊನ್ನೆ ರವಿವಾರ ದಿ. 07 ರಂದು ಚೈತಾಲಿಯನ್ನು ಆಸ್ಪತ್ರೆಗೆ ತೋರಿಸುವುದಾಗಿ ಪತಿ ಪ್ರದೀಪ ಬೈಕ್ ಮೇಲೆ ಕೂರಿಸಿಕೊಂಡು, ಶಿರಗುಪ್ಪಿ ಗ್ರಾಮಕ್ಕೆ ಹೋಗಿದ್ದನು. ಮಾರ್ಗ ಮಧ್ಯ ಬೈಕ್ ನಿಲ್ಲಿಸಿ, ಮೂತ್ರ ವಿಸರ್ಜನೆ ಮಾಡಲು ಹೋದಾಗ ಶಿರಗುಪ್ಪಿ ಕಡೆಯಿಂದ ಬಂದ ಕಾರು ರಸ್ತೆ ಬದಿಗೆ ನಿಂತ ಚೈತಾಲಿ ಮೇಲೆ ಹರಿದಿದೆ. ರಕ್ತದಲ್ಲಿ ಬಿದ್ದಿದ್ದ ಚೈತಾಲಿಯನ್ನು ಪತಿ ಪ್ರದೀಪ ಅದೇ ಕಾರಿನಲ್ಲಿ ಮಿರಜ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾನೆ. ಚಿಕಿತ್ಸೆ ಫಲಿಸದೇ ಆಕೆ ಸಾವೀಗೀಡಾಗಿದ್ದಾಳೆ. ಇದನ್ನು ತಿಳಿದ ತಂದೆ ನನ್ನ ಮಗಳನ್ನು ಕಾರು ಹಾಯಿಸಿ ಕೊಲೆ ಮಾಡಿ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಅಪಘಾತ ಎಂದು ಬಿಂಬಿಸಿದ್ದಾರೆ. ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಸೋಮವಾರ ದಿ. 08 ರಂದು ಕಾಗವಾಡ ಠಾಣೆಗೆ ದೂರು ದಾಖಲಿಸಿದ್ದಾರೆ.
ದೂರಿನ ಅನ್ವಯ ಪೋಲಿಸರು ಪತಿ ಪ್ರದೀಪ ಹಾಗೂ ಮತ್ತು ಕಾರ ಚಾಲಕ ಮತ್ತು ಕಾರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ. ಸ್ಥಳಕ್ಕೆ ಪೋಲಿಸ್ ಉಪಾಧಿಕ್ಷಕ ರಾಮನಗೌಡ ಬಸರಗಿ, ಡಿವೈಎಸ್ಪಿ ಪ್ರಶಾಂತ ಮುನ್ನೋಳಿ, ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ರಾಘವೇಂದ್ರ ಖೋತ ಭೇಟಿ ನೀಡಿ ಪರೀಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 