ಭೂಕುಸಿತ: 13 ಮಂದಿ ಸಾವು
ಮೆಕ್ಸಿಕೋ ಸಿಟಿ: ಏಪ್ರಿಲ್ 09 : ಆಂಟಿಯೋಕ್ವಿಯಾದ ವಾಯುವ್ಯ ಕೊಲಂಬಿಯಾದ ಗಣಿಗಾರಿಕೆ ಶಿಬಿರದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮವಾಗಿ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಎಂದು ಪ್ರಾದೇಶಿಕ ರಕ್ಷಣಾ ಸೇವೆ ತಿಳಿಸಿದೆ.
ಭೂಕುಸಿತದಿಂದ ಸತ್ತವರ ಸಂಖ್ಯೆ 13 ಜನರಿಗೆ ಏರಿದೆ. ರಕ್ಷಣಾ ತಂಡಗಳು ನಾಪತ್ತೆಯಾದ ವ್ಯಕ್ತಿಯನ್ನು ಪತ್ತೆ ಹಚ್ಚಲು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎಂದು ರಕ್ಷಣಾ ಸೇವೆ ತಿಳಿಸಿದೆ.
ಕೆನಡಾದ ಗಣಿ ಕಂಪನಿ ಫೆನಿಕ್ಸ್ ಒರೊ ಗೋಲ್ಡ್‌ನ ಶಿಬಿರ ಇದಾಗಿದ್ದು, ಸಾವನ್ನಪ್ಪಿದವರು ಈ ಕಂಪನಿಯ ಉದ್ಯೋಗಿಗಳು ಎಂದು ಗಣಿಗಾರರೊಬ್ಬರು ತಿಳಿಸಿದರು. ಭಾರೀ ಮಳೆಯಿಂದ ಈ ಅನಾಹುತ ಸಂಭವಿಸಿದೆ ಎಂದು ತಿಳಿದು ಬಂದಿದೆ.