ಶಾಲಾ ಕೋಣೆಗಳ ನಿರ್ಮಾಣಕ್ಕೆ ಭೂಮಿ ಪೂಜೆ
ರಬಕವಿ-ಬನಹಟ್ಟಿ 03: ಲೋಕೋಪಯೋಗಿ ಇಲಾಖೆಯ 2018-19 ನೇ ಸಾಲಿನ ಅಂದಾಜು ಮೊತ್ತ 60 ಲಕ್ಷದ ಅನುದಾನಡಿ ನಿರ್ಮಾಣವಾಗುತ್ತಿರುವ ರಬಕವಿ ನಗರದ ಸರಕಾರಿ ಪ್ರೌಢಶಾಲೆಯ ನಾಲ್ಕು ಹೊಸದಾದ ಕೋಣೆಗಳ ಕಟ್ಟಡಕ್ಕೆ ತೇರದಾಳ ಕ್ಷೇತ್ರದ ಶಾಸಕ ಹಾಗೂ ಕೆ.ಎಚ್.ಡಿ.ಸಿ. ನಿಗಮದ ಅಧ್ಯಕ್ಷ ಸಿದ್ದು ಸವದಿಯವರು ಭೂಮಿ ಪೂಜೆ ನೆರೆವೇರಿಸಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ, ಶ್ರೀಶೈಲ ಭಾವಿಕಟ್ಟಿ, ಪ್ರಭು ಪೂಜಾರಿ, ಮಹಾದೇವ ಕೋಟ್ಯಾಳ, ಹರೀಶ ಚೌಗಲೆ, ಶಿಕ್ಷಕ ವಿಜಯಕುಮಾರ ಹಲಕುರ್ಕಿ ಸೇರಿದಂತೆ ಅನೇಕರಿದ್ದರು.