ರಾಣೆಬೆನ್ನೂರ

ಕೂಲಿ ಕಾರ್ಮಿಕ ದಂಪತಿಗಳ ಸನ್ಮಾನ: ಸಂಭ್ರಮಿಸಿದ ಸಹೋದ್ಯೋಗಿ ಕಾರ್ಮಿಕರು

ಕೂಲಿ ಕಾರ್ಮಿಕ ದಂಪತಿಗಳ ಸನ್ಮಾನ: ಸಂಭ್ರಮಿಸಿದ ಸಹೋದ್ಯೋಗಿ  ಕಾರ್ಮಿಕರು

 ರಾಣೇಬೆನ್ನೂರು 13: ತಾಲೂಕಿನ  ನದಿಹರಳಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುಲಿಕಟ್ಟಿ ಗ್ರಾಮದ ಹಳ್ಳ ಹೂಳೆತ್ತುವ ಕಾಮಗಾರಿ ನರೇಗಾ ಯೋಜನೆಯಲ್ಲಿ ಇತ್ತೀಚಿಗೆ ನಡೆಯಿತು. ಪಾಲ್ಗೊಂಡಿದ್ದ ನರೇಗಾ ಯೋಜನೆಯ ನೂರಾರು ಕಾರ್ಮಿಕರ ಸಮ್ಮುಖದಲ್ಲಿ ಅಂದಾಜು 45 ವರ್ಷದ ಕಾರ್ಮಿಕ ನವದಂಪತಿಗಳನ್ನು ಕಾರ್ಮಿಕರು ವಿಶೇಷ ಮರು ಮದುವೆ ಮಾಡುವ ಮೂಲಕ ಸಂಭ್ರಮಿಸಿದರು.  ಹಿರಿಯ ಕೂಲಿ ಕಾರ್ಮಿಕರಾದ ಚಂದ್ರಗೌಡ ಮತ್ತು ಶೇಕಮ್ಮ ಇವರಿಬ್ಬರ 45 ನೇ ವರ್ಷದ ವಿವಾಹ ವಾರ್ಷಿಕೋತ್ಸವ ನೆರವೇರಿಸಿ ಕಾರ್ಮಿಕರು ಪ್ರೀತಿ, ವಿಶ್ವಾಸ ಮತ್ತು ಅಭಿಮಾನದಿಂದ ನವ ದಂಪತಿಗಳಿಗೆ ಶುಭ ಹಾರೈಸಿ ಸಿಹಿ ವಿತರಿಸಿದರು. ಈ

ಸಂದರ್ಭದಲ್ಲಿಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಕಿರಣಕುಮಾರ ಕಮ್ಮಾರ, ಕಾರ್ಯದರ್ಶಿ ಶ್ರೀಧರ್ ಶೇಷಗಿರಿ ನೂರಜಾನ್, ಹನುಮಂತಗೌಡ ಭರಮ ಗೌಡ್ರ, ಗೀತಾ ಬಣಕಾರ್, ಮಲ್ಲಿಕಾರ್ಜುನ ಹನಗೋಡಿಮಠ, ನಾಗಪ್ಪ ಕಾಯಕದ, ಸಿದ್ದಪ್ಪ ಪೂಜಾರ್, ಚಂದ್ರಗೌಡ ಕೆಂಚನಗೌಡ್ರ, ದಿಳ್ಳೇಪ್ಪ ಪೂಜಾರ್, ಕರಿಯಪ್ಪ ಇಟಗಿ, ಅಶೋಕ ಜವಳೇರ, ಬಸಪ್ಪ ಕಜ್ಜರಿ, ಶೇಖಪ್ಪ ಕಜ್ಜರಿ , ಮಲ್ಲಿಕಾರ್ಜುನಯ್ಯ, ರೇವಣಪ್ಪ ಹೊಸಳ್ಳಿ, ಮಾದೇವಪ್ಪ ಬಟ್ಟಂಗಿ, ಹನುಮಂತಪ್ಪ ಹೊಸಳ್ಳಿ, ಕೆಂಚಪ್ಪ ಗೊಲ್ಲರ್, ನಾಗಪ್ಪ ಹೊಸಳ್ಳಿ, ಮಲ್ಲಮ್ಮ ಚಿಕ್ಕನಗೌಡ್ರ, ಕವಿತಾ ಕುರುಬರ, ಮಂಜವ್ವ ಹೊಸಳ್ಳಿ, ಜಯಮ್ಮ ಕೋಲ್ಕಾರ್, ಕವಿತಾ ಬಣಕಾರ್ ನಾಗಮ್ಮ ಪೂಜಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿವಾಹ ಮಹೋತ್ಸವದ ನಿಮಿತ್ತ ಕೂಲಿ ಕಾರ್ಮಿಕರು ಇತಿಹಾಸ ಪರಂಪರೆಯ ಜಾನಪದ ಸಾಂಸ್ಕೃತಿಕ ಕಲೆಗಳಾದ ಜಾನಪದ ಗೀತೆಗಳು, ಸೋಬಾನೆ, ಪಾರಂಪರಿಕ  ಕ್ರೀಡೆಗಳು, ಸೇರಿದಂತೆ ವೈವಿಧ್ಯಮಯ ಕಲೆಗಳ ಪ್ರದರ್ಶನ ನೀಡಿ ಗ್ರಾಮದ ನಾಗರಿಕರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ಕಾರ್ಮಿಕರಿಗಾಗಿ ಪಂಚಾಯಿತಿ ವತಿಯಿಂದ ಆರೋಗ್ಯ ತಪಾಷಣೆ ಏರಿ​‍್ಡಸಲಾಗಿತ್ತು. 


ಸುದ್ದಿ ಓದಿ