ಸರ್ಕಾರ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕ ಕಾರ್ಡ ನೊಂದಣಿ ಅವಶ್ಯಕ- ವಡ್ಡರ
ಮಹಾಲಿಂಗಪುರ 01 : ಅಸಂಘಟಿತ ಕಾರ್ಮಿಕರಲ್ಲಿ ಖಾಸಗಿ ವಾಣಿಜ್ಯ ಹಾಗೂ ಇತರೆ ಸಂಬಂದಿತ 40 ಲಕ್ಷ ಕಾರ್ಮಿಕರು ಇದ್ದಾರೆ. ಅವರಿಗೆ ಸರ್ಕಾರ ಸಮಾಜಿಕ ಭದ್ರತೆ ಹಾಗೂ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಸರ್ಕಾರ ಕ್ಷೇಮಾಭಿವೃದ್ದಿ ಯೋಜನೆಯನ್ನು ಅನಷ್ಠಾನ ಮಾಡಿದೆ ಕಾರಣ ಎಲ್ಲ ತರಹದ ಕಾರ್ಮಿಕರು ಮೊದಲು ಕಾರ್ಮಿಕ ಕಾರ್ಡಿಗೆ ನೊಂದಣಿ ಮಾಡಿಸಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆಯಬೇಕೆಂದು ಮುಧೋಳದ ಲೇಬರ್ ಇನ್ಸಫೇಕ್ಟರ ಅಶೋಕ ವಡ್ಡರ ಹೇಳಿದರು.
ಸ್ಥಳೀಯ ರಾಜ್ಯ ನೇಕಾರ ಸೇವಾ ಸಂಘ, ಮತ್ತುಕಾರ್ಮಿಕ ಇಲಾಖೆಯ ಆಶ್ರಯದಲ್ಲಿ ನೇಕಾರ ಸಂಘದ ಕಚೇರಿಯಲ್ಲಿ ನಡೆದ ಅಸಂಘಟಿತ ವಲಯದ ಕಾರ್ಮಿಕರಿಗೆ ಕಾರ್ಮಿಕ ಸೌಲಭ್ಯದ ಮಾಹಿತಿ ಮತ್ತು ನೋದಣಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಈ ಯೋಜನೆಯಲ್ಲಿ ಸಂಬಂದಿತ ಕಾರ್ಮಿಕರನ್ನು ನೊಂದಾಯಿಸಿ ಸೌಲಭ್ಯಗಳನ್ನೋಳಗೊಂಡ ಸ್ಮಾರ್ಟಕಾರ್ಡ ನೀಡಲಾಗುತ್ತಿದ್ದು ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನಧನ ಯೋಜನೆಯಡಿ 60 ವರ್ಷದ ನಂತರ ಪಿಂಚಣಿ ಪಡೆಯಲು 18 ರಿಂದ 40 ವರ್ಷದ ಒಳಗಿನ ಕಾರ್ಮಿಕರು ಅರ್ಜಿ ಹಾಕಬೇಕು, 60 ವರ್ಷದ ನಂತರ ಪಿಂಚಣಿ ಪ್ರತಿ ತಿಂಗಳು 3 ಸಾವೀರ ರೂ ದಂತೆ ಬರುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಘ ಟಿರ್ಕಿ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ನಾಲ್ಕು ಲಕ್ಷ ಕಾರ್ಮಿಕರಿದ್ದು, ಇನ್ನೂ ಸಾಕಷ್ಟು ನೋದಣಿ ಮತ್ತು ಗುರುತಿನ ಚೀಟಿ ಹಂಚಿಕೆ ಮಾಡಬೇಕು, ಮತ್ತು ನೇಕಾರರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿ ಸೌಲಭ್ಯಗಳನ್ನು ಜಾರಿ ಮಾಡಬೇಕು, ಪ್ರಧಾನ ಮಂತ್ರಿ ಶ್ರಮಯೋಗಿ ಮಾನಧನ ಇದನ್ನು ವಯೋಮಿತಿ 50 ವರ್ಷದ ವರೆಗೆಏರಿಕೆ ಮಾಡಬೇಕು, ಕಾರ್ಮಿಕರಿಗೆ ಅವರು ಇರುವಾಗಲೇ ಎಲ್ಲ ಸೌಲಭ್ಯಗಳನ್ನು ಕಟ್ಟಕಡೆಯ ವ್ಯೆಕ್ತಿಗೂ ತಲುಪಿಸಲು ಅಧಿಕಾರಿಗಳು ಮತ್ತು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜೇಂದ್ರ ಮಿರ್ಜಿ, ರಾಘವೇಂದ್ರ ಬೆಳಗಲಿ, ಸೋಮು ಮಿರ್ಜಿ, ಶಾಹಿನಷಾ ಚಿಕ್ಕೋಡಿ, ಲಾಲಸಾಬ ನಗಾರ್ಚಿ, ಸಲಿಂ ಅರಬ, ಬಸು ಜಮಖಂಡಿ, ಸುಮಿತ್ರಾ ಬೆಳಗಲಿ, ಗೀತಾಕರಡಿ, ರಾಜು ಕುಕ್ಕುಗೋಳ, ರಮೇಶ ನಾಗರಾಳ, ಸಂಜುಜಿಡ್ಡಿಮನಿ, ಗಣೇಶ ವಂದಾಲ, ಹಾಜಿಸಾಬ ಖಾಲೆಖಾನ ಇದ್ದರು. ಮಹಾಲಿಂಗಪುರ :ಕಾರ್ಮಿಕ ಸೌಲಭ್ಯ ಮತ್ತು ನೊಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಅಶೋಕ ವಡ್ಡರ ಕಾರ್ಮಿಕ ಸೌಲಭ್ಯದ ಮಾಹಿತಿ ನೀಡಿ, ಕಾರ್ಡ ವಿತರಿಸಿದರು.