ಕ್ರಾಂತಿ ಸಿನಿಮಾದ ಉತ್ಸವ ಮಾಡಬೇಕೆಂದು ಸಂವಿಧಾನಕ್ಕೆ ಅಪಮಾನ
ಲೋಕದರ್ಶನ ವರದಿ
ಮುಂಡರಗಿ 26: ಗಣರಾಜ್ಯೋತ್ಸವದ ದಿನ ನಮ್ಮ ದೇಶದ ಪ್ರಾಮುಖ್ಯತೆಯ ಭಾಗವಾಗಿದ್ದು ಅಂದಿನ ದಿನವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು, ಇಂತಹ ಸಂದರ್ಭದಲ್ಲಿ ಗಣರಾಜ್ಯೋತ್ಸವ ಬದಲು ಕ್ರಾಂತಿ ಸಿನಿಮಾದ ಉತ್ಸವ ಮಾಡಬೇಕೆಂದು ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕಾ ದಲಿತ ಚಳವಳಿ ವೇದಿಕೆಯಿಂದ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ತಾಲೂಕಾ ದಲಿತ ಚಳವಳಿ ವೇದಿಕೆ ಅದ್ಯಕ್ಷ ಲಕ್ಷ್ಮಣ ತಗಡಿನಮನಿ ಮಾತನಾಡಿ, ನಟಿ ರಚಿತರಾಮ್ ಅವರು ಒಬ್ಬ ದೇಶದ್ರೋಹಿ ಮಾತುಗಳನ್ನಾಡಿದ್ದು ಕೂಡಲೇ ಅವರ ಮೇಲೆ ದೇಶ ದ್ರೋಹಿ ಕಾನೂನು ಕ್ರಮ ಜರುಗಿಸಬೇಕು ಜೊತೆಗೆ ಚಲನಚಿತ್ರ ಮಂಡಳಿಯಿಂದ 5 ವರ್ಷಗಳ ಕಾಲ ವಜಾಗೋಳಿಸಬೇಕು ಜೊತೆಗೆ ಕರ್ನಾ ಟಕದ ಜನತೆಗೆ ಕ್ಷಮೇ ಕೇಳಬೇಕೆಂದು ಒತ್ತಾಯಿಸಿದರು.
ನಿಂಗಪ್ಪ ಪೂಜಾರ, ಅಶೋಕ ಹೊಸಮನಿ, ಹನಮಂತ ಚನ್ನದಾಸರ, ಅಡಿವೆಪ್ಪ ಚಲವಾದಿ, ಮರಿಯಪ್ಪ ಶಿದ್ದಣ್ಣವರ, ಫಕ್ಕೀರಪ್ಪ ಮಾದರ, ದುರಗಪ್ಪ ಹರಿಜನ, ಮಂಜು ತಳಗೇರಿ ಸೇರಿದಂತೆ ಇತರರಿದ್ದರು