ಅಂತರರಾಷ್ಟ್ರೀಯ

ಕೊಸೊವೊ; ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ಸಿನ ಮೇಲೆ ಗುಂಡಿನ ದಾಳಿ ಇಬ್ಬರ ಸಾವು

ಕೊಸೊವೊ; ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ಸಿನ ಮೇಲೆ ಗುಂಡಿನ ದಾಳಿ ಇಬ್ಬರ ಸಾವು

ಪ್ರಿಸ್ಟಿನಾ (ಕೊಸೊವೊ),ನ  27   -  ಪಶ್ಚಿಮ  ಕೊಸೊವೊದಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ಸೊಂದರ   ಮೇಲೆ    ಗುರುತು ಸಿಗದ   ಬಂದೂಕುಧಾರಿಯೊಬ್ಬ   ನಡೆಸಿದ  ಗುಂಡಿನ ದಾಳಿಯಲ್ಲಿ   ಮೂವರು ಸಾವನ್ನಪ್ಪಿ,   ಇಬ್ಬರು  ಗಂಭೀರವಾಗಿ  ಗಾಯಗೊಂಡಿರುವ ಘಟನೆ   ಶುಕ್ರವಾರ  ನಡೆದಿದೆ.

ರಾಜಧಾನಿ   ಪ್ರಿಸ್ಟಿನಾದಿಂದ ಪಶ್ಚಿಮಕ್ಕೆ 90 ಕಿಲೋಮೀಟರ್ ದೂರವಿರುವ ಗ್ಲೋಗ್ಜಾನ್‌ನಲ್ಲಿ  ಬಸ್ಸೊಂದರ  ಮೇಲೆ     ಗುಂಡಿನ  ದಾಳಿ  ನಡೆದಿದೆ  ಎಂದು ಪೇಜಾದಲ್ಲಿ ಪೊಲೀಸರು ತಿಳಿಸಿದ್ದಾರೆ.    ದಾಳಿಯಲ್ಲಿ  ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ತೀವ್ರವಾಗಿ  ಗಾಯಗೊಂಡಿದ್ದ ಮೂವರನ್ನು ಆಸ್ಪತ್ರೆಗೆ  ದಾಖಲಿಸಲಾಗಿದ್ದು,  ಈ ಪೈಕಿ  ಇಬ್ಬರು ಸಾವನ್ನಪ್ಪಿದ್ದಾರೆ.
ಎಂಟು ಮಂದಿ ವಿದ್ಯಾರ್ಥಿಗಳಿದ್ದ  ಬಸ್‌ನತ್ತ  ಬಂದೂಕುಧಾರಿಯೊಬ್ಬ  ಸ್ವಯಂಚಾಲಿತ  ಬಂದೂಕಿನಿಂದ  ನಿಂದ ಗುಂಡು  ಹಾರಿಸಿದ್ದಾನೆ ಎಂದು  ಪೊಲೀಸ್‌  ಅಧಿಕಾರಿ  ತಿಳಿಸಿದ್ದಾರೆ.

ಅಧ್ಯಕ್ಷ ವ್ಜೋಸಾ ಒಸ್ಮಾನಿ    ಈ ದಾಳಿಯನ್ನು ತೀವ್ರ ಖಂಡಿಸಿದ್ದು,   ಅಪರಾಧಿಯನ್ನು  ಆದಷ್ಟು  ಶೀಘ್ರ  ಪತ್ತೆ ಹಚ್ಚುವಂತೆ  ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಸುದ್ದಿ ಓದಿ