ಕೊರ್ಲಗುಂದಿ ವಿ ದೊಡ್ಡ ಕೇಶವರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರೆ್ಡ ಬೆಂಬಲಿಗರ ಸಂತಸ
ಬಳ್ಳಾರಿ 15 : ರೆಡ್ಡಿ ಸಮುದಾಯದ ಹಿರಿಯ ಧು-ರೀಣರು ಹಾಗೂ ಪಿಎಲ್ಡಿ ಬ್ಯಾಂಕ್ನ ಅಧ್ಯಕ್ಷರೂ ಆದ ಕೊರ್ಲಗುಂದಿ ವಿ ದೊಡ್ಡ ಕೇಶವರೆಡ್ಡಿ ಕಂಪ್ಲಿ ಶಾಸಕ ಜೆ ಎನ್ ಗಣೇಶ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರೆ್ಡಯಾಗಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಕೊರ್ಲಗುಂದಿ ದೊಡ್ಡ ಕೇಶವರೆಡ್ಡಿರವರು ಪಿಎಲ್ಡಿ ಬ್ಯಾಂಕ್ಗೆ ಸತತವಾಗಿ 3ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೊರಗುಂದಿ ದೊಡ್ಡ ಕೇಶವರೆಡ್ಡಿಯವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿ, ತಮ್ಮ ಹೆಚ್ಚಿನ ಸಂಖ್ಯೆಯ ಬೆಂಬಲಿಗರೊಂದಿಗೆ ಕಂಪ್ಲಿ ಜೆ.ಎನ್.ಗಣೇಶ್ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರೆ್ಡಯಾಗಿದ್ದಾರೆ.
ಇವರ ಸೇರೆ್ಡಯಿಂದ ಕಂಪ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಶ್ರೀಧರಗಡ್ಡೆ ಜಿ.ಪಂ. ಕ್ಷೇತ್ರ ಹಾಗೂ ಕೊರಗುಂದಿ ಜಿ.ಪಂ.ಕ್ಷೇತ್ರಗಳೂ ಸೇರಿದಂತೆ ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೆಡ್ಡಿ ಬೆಂಬಲಿಗರು ಸಂತಸವನ್ನು ವ್ಯಕ್ತಪಡಿಸಿದ್ದಾರೆ.