ಕೆಜಿಎಫ್ ಚಿತ್ರಕ್ಕೆ ಮದರ್ ಸೆಂಟಿಮೆಂಟ್ ಹಾಡು ಬರೆದವರು ಕೊಪ್ಪಳದ ಪ್ರತಿಭೆ
ಲೋಕದರ್ಶನ ವರದಿ
ಕೊಪ್ಪಳ 17: ವಿಶ್ವಾದ್ಯಂತ ಕನ್ನಡದ ಕೆಜಿಎಫ್ ಚಿತ್ರ ಹವಾ ಎಬ್ಬಿಸಿದೆ. ಈಗಾಗಲೇ ಕೆಜಿಎಫ್ನ ಟ್ರೈಲರ್ ಹಾಗೂ ಹಾಡುಗಳು ಬಿಡುಗಡೆಯಾಗಿ ಚಿತ್ರದ ಕ್ರೇಜ್ ಮತ್ತಷ್ಟು ಹೆಚ್ಚಿಸಿವೆ. "ಗರ್ಭದಿ.. ನನ್ನಿರಿಸಿಊರಲಿ ನಡೆಯುತಿರೆತೇರಲಿ ಕುಳಿತಂತೆ, ಅಮ್ಮಾ.."ಎಂಬ ತಾಯಿ ಕುರಿತು ಸೆಂಟಿಮೆಂಟ್ ಹಾಡು ಹಾಗೂ ಅದರ ಸಾಹಿತ್ಯ ಕನ್ನಡಿಗರ ಹೃದಯ ಗೆದ್ದಿದೆ. ಕೆಜಿಎಫ್ ಚಿತ್ರದ ಈ ಮದರ್ ಸೆಂಟಿಮೆಂಟ್ ಹಾಡನ್ನು ಬರೆದವರು ಕೊಪ್ಪಳ ತಾಲೂಕಿನ ಕಲೆ ಹೆಸರಾದ ಕಿನ್ನಾಳ ಗ್ರಾಮದ ಕಿನ್ನಾಳ ರಾಜ್.
ಈ ಹಾಡು ಈಗ ಕೊಟ್ಯಾಂತರ ಕನ್ನಡಿಗರ ಮೆಚ್ಚುಗೆ ಗಳಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ. ಹಾಡು ಹುಟ್ಟಿದ ಕ್ಷಣದ ಬಗ್ಗೆ ಕಿನ್ನಾಳ ರಾಜ್, ತಮ್ಮ ಮನದ ಮಾತನ್ನು ಅವರು ಪತ್ರಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಕೆಜಿಎಫ್ ಅನ್ನೋ ದೊಡ್ಡ ಚಿತ್ರದಲ್ಲಿ ನಾನೊಬ್ಬ ಸಾಹಿತಿ ಅಂತಾ ಹೇಳಿಕೊಳ್ಳುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ. ಕೆಜಿಎಫ್ ಚಿತ್ರದ ಗರ್ಭದಿಂದ ಹಾಡನ್ನು ಹಿಟ್ ಮಾಡಿದ್ದೀರಾ. ತಾಯಿ ಬಗ್ಗೆ ಇರುವ ಹಾಡು ಇದು.. ನಿಮ್ಮ ಹೊಗಳಿಕೆ.. ಹಾರೈಕೆ ಏನೇ ಇದ್ದರು ಇದೆಲ್ಲಾ ಸಲ್ಲಿಸಬೇಕಾದದ್ದು ನಿದರ್ೇಶಕ ಪ್ರಶಾಂತ ನೀಲ್ ಹಾಗೂ ಸಂಗೀತ ನಿದರ್ೇಶಕರಾದ ರವಿ ಸರ್ಗೆ, ಪ್ರಶಾಂತ್ ಸರ್ ಹೇಳಿದ್ದ ರೀತಿ ಮನಸ್ಸಿಗೆ ಕಟ್ಟಿಕೊಟ್ಟಿತ್ತು.. ರವಿ ಸರ್ ಒಂದು ಮಾತು ಹೇಳಿದ್ರು, ಹಾಡು ಅನ್ನುವುದಕ್ಕಿಂತಲೂ ನಿಮ್ಮ ತಾಯಿ ಬಗ್ಗೆ ಏನಾದ್ರು ಬರೆಯುವುದಕ್ಕೆ ಅವಕಾಶ ಅಂತ ಅನ್ಕೋಳ್ಳಿ, ಚೆನ್ನಾಗಿ ಬರೆಯಿರಿ ಅಂತಾ ಹೇಳಿದ್ರು. ಆ ಎರಡು ಜವಾಬ್ದಾರಿ ಗರ್ಭದಿಂದ ಹಾಡು ಹುಟ್ಟುವುದಕ್ಕೆ ಕಾರಣವಾಯ್ತು. ಎಲ್ಲರಿಗೂ ತುಂಬಾ ಧನ್ಯವಾದಗಳು.. ಹಾಡು ಬಗ್ಗೆ ಎಷ್ಟೇ ಹೇಳಿದ್ರು ಕಮ್ಮಿ. ನಿಮ್ಮೆಲ್ಲ ಹೊಗಳಿಕೆ ಸರ್ಗೆ ಸಲ್ಲಬೇಕಾದ್ದದು. ಇದೇ ತಿಂಗಳ 21ಕ್ಕೆ ಚಿತ್ರ ಬಿಡುಗಡೆಯಾಗಲಿದೆ. ನೀವು ಎಷ್ಟು ಕುತೂಹಲದಿಂದ ಕಾಯುತ್ತಿದ್ದೀರೋ, ಅಷ್ಟೇ ಕುತೂಹಲದಿಂದ ನಾನು ಕೂಡಾ ನನ್ನ ಹಾಡುನ್ನು ತೆರೆ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದೇನೆ. ನನ್ನತಂಹ ಹೊಸಬನಿಗೆ ನಿಮ್ಮೆಲ್ಲರ ಪ್ರೊತ್ಸಾಹ ಅಗತ್ಯ. ನಿಮ್ಮೆಲ್ಲರ ಆಶೀವರ್ಾದ ಸದಾ ನನ್ನ ಮೇಲೆ ಇರಲಿ ಅಂತಾ ಕೇಳಿಕೊಳ್ಳುತ್ತೇನೆ ಎಂದು ಕಿನ್ನಾಳ ರಾಜ್ ಹೇಳಿದರು.
ಕೊಪ್ಪಳದ ಪ್ರತಿಭೆ ಕಿನ್ನಾಳ ರಾಜ್ ಅವರು ಕನ್ನಡ ಚಿತ್ರರಂಗದಲ್ಲಿ ಇನ್ನು ಹೆಚ್ಚು ಸಾಧನೆ ಮಾಡಿ ಎತ್ತರಕ್ಕೆ ಬೆಳೆಯಲಿ ಎಂಬುದು ಕೊಪ್ಪಳ ಜನತೆಯ ಆಶಯ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 