ಟ್ರೇಲರ್‌ನಿಂದ ಗಮನ ಸೆಳೆಯುತ್ತಿರುವ 'ಶೇರ್'
ಮೇ 15ರಂದು ಕಿರಣ್ ರಾಜ್ - ಕ್ರಿಶ್ ಅಭಿನಯದ ಸಿನಿಮಾ ತೆರೆಗೆ
ಗ್ರೇಸ್ ರಾಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಬೀದರ ಮೂಲದ ಡಾಽಽಸುದರ್ಶನ್ ಸುಂದರರಾಜ್ ನಿರ್ಮಾಣ ಮಾಡಿರುವ 'ಶೇರ್' ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಹೌದು ಪ್ರಸಿದ್ಧ್ ನಿರ್ದೇಶನದಲ್ಲಿ ಕಿರಣ್ ರಾಜ್ ನಾಯಕರಾಗಿ ನಟಿಸಿರುವ 'ಶೇರ್' ಮೇ 15ರಂದು ತೆರೆಗೆ ಬರುತ್ತಿದೆ. ಹಾಗಾಗಿ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಜಾಲತಾಣದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ಳುತ್ತಿದೆ. ಈ ಟ್ರೇಲರ್‌ನ್ನು ಗ್ರೇಜ್ ರಾಜ್ ಫ್ಯಾಮಿಲಿಯ ಸೊಸೆಯಂದಿರು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಶೇರ್ ಚಿತ್ರದ ಮೂಲಕ ಗ್ರೇಜ್ ರಾಜ್ ಫ್ಯಾಮಿಲಿಯ ಯುವ ಪ್ರತಿಭೆ ಕ್ರಿಶ್ ಕಲಾವಿದನಾಗಿ ಚಿತ್ರರಂಗಕ್ಕೆ ಪ್ರವೆಶ ಮಾಡುತ್ತಿದ್ದು, ವಿಲನ್ ಪಾತ್ರ ಮಾಡಿದ್ದಾರೆ. ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ ಹೆಚ್.ಕುಮಾರ್ (ರಾಟೆ).
ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಪ್ರಸಿದ್ಧ್, 'ಶೇರ್' ನನ್ನ ನಿರ್ದೇಶನದ ಮೂರನೇ ಚಿತ್ರ. ಕಿರಣ್ ರಾಜ್ ಅವರು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ನಾರ್ಮಲ್ ಕಥೆಯಾದರು, ಸಾಕಷ್ಟು ಕುತೂಹಲಕರ ಅಂಶಗಳನ್ನು ಒಳಗೊಂಡ ಚಿತ್ರ. ಅನಾಥ ಮಕ್ಕಳ ಜೀವನದಲ್ಲಿ ಏನೇನೆಲ್ಲಾ ಆಗುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ನಿರ್ಮಾಪಕರ ಪುತ್ರ ಕ್ರಿಶ್ ರಾಡ್ರಿಗ್ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅವರ ಡೆಡಿಕೇಶನ್ ತುಂಬಾ ಇದೆ. ತನಿಷಾ ಕುಪ್ಪಂಡ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ನಮ್ಮ ಚಿತ್ರಕ್ಕೆ ಎ ಪ್ರಮಾಣಪತ್ರ ನೀಡಿದ್ದು, ಮೇ 15ರಂದು ಸಿನಿಮಾ ಬಿಡುಗಡೆ ಮಾಡಲಿದ್ದೇವೆ' ಎಂದು ಹೇಳಿದರು. ನಂತರ ನಾಯಕ ಕಿರಣ್ ರಾಜ್, 'ನಿರ್ದೇಶಕರು 'ಭರ್ಜರಿ ಗಂಡು'ನಲ್ಲಿ ನನ್ನನ್ನು ಆಕ್ಷನ್‌ಗೆ ಪರಿಚಯ ಮಾಡಿಸಿದ್ರೂ. ಇದರಲ್ಲೂ ಆಕ್ಷನ್ ಹೀರೋ ಆಗಿದ್ದೇನೆ. ಶೇರ್‌ನಲ್ಲಿ ನಾನು ಅನಾಥ ಹುಡುಗನ ಪಾತ್ರ ಮಾಡಿದ್ದೇನೆ. ಇದೊಂದು ಕ್ರೈಂ, ಆಕ್ಷನ್ ಸಿನಿಮಾ ಎಂದು ಹೇಳಬಹುದು. ಇದರಲ್ಲಿ ನಾನು ಒಂದು ಪಾರ್ಟ್ ಆಗಿ ನಟನೆ ಮಾಡಿದ್ದು, ಎಲ್ಲರಿಗೂ ಸಿನಿಮಾ ಇಷ್ಟವಾಗಲಿದೆ' ಎಂದರು. ಇನ್ನು ವಿಲನ್ ಪಾತ್ರ ಮಾಡಿರುವ ಕ್ರಿಶ್, 'ನಂಗೆ ಹೀರೋ ಆಗಬೇಕು ಎಂಬ ಆಸೆ ಇತ್ತು. ಆದರೆ ನಿರ್ದೇಶಕರು ಹೇಳಿದ ಒಂದು ಮಾತಿಗಾಗಿ ವಿಲನ್ ಆಗಿ ನಟಿಸಿದ್ದೇನೆ. 'ದುನಿಯಾ' ಚಿತ್ರದಲ್ಲಿ ಯೋಗಿ ಅವರು ಮಾಡಿದಂತಹ ಪಾತ್ರವಿದು. ತುಂಬಾ ತಯಾರಿ ಮಾಡಿಕೊಂಡು ಅಭಿನಯಿಸಿರುವುದಾಗಿ' ತಿಳಿಸಿದರು.
ನಿರ್ಮಾಪಕ ಡಾಕ್ಟರ್ ಸುದರ್ಶನ್ ಸುಂದರ ರಾಜ್ ಮಾತನಾಡಿ, 'ವೃತ್ತಿಯಲ್ಲಿ ನಾನು ವಕೀಲ. ನಾವು ನಾಲ್ಕು ಜನ ಅಣ್ಣ ತಮ್ಮಂದಿರು ಸೇರಿ ಮಗನಿಗಾಗಿ ಈ ಸಿನಿಮಾ ಮಾಡಿದ್ದೇವೆ. ಅವನಿಗಾಗಿ ಪ್ರೊಡಕ್ಷನ್ ಹೌಸ್ ಪ್ರಾರಂಭ ಮಾಡಿದೆವು. ಈಗ ಮೇ 15ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಕೆ.ಆರ್.ಜಿ. ಫಿಲಂಸ್ ನಮ್ಮ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ' ಎಂದರು. ನಾಯಕಿ ಸುರೇಖಾ, 'ಇದು ನನ್ನ ಎರಡನೇ ಸಿನಿಮಾ. ಈ ಮೊದಲು 'ಭರ್ಜರಿ ಗಂಡು'ದಲ್ಲಿ ಅಭಿನಯಿಸಿದ್ದೆ. ಶೇರ್‌ನಲ್ಲಿ ನನಗೆ ಎರಡು ಶೇಡ್ ಪಾತ್ರವಿದೆ' ಎನ್ನುವರು. ನಂತರ ನಟಿ ತನಿಷಾ ಕುಪ್ಪಂಡ ಮಾತನಾಡಿ, 'ನಾನು ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿರುವ ಮೊದಲ ಚಿತ್ರವಿದು. ಆನಂತರ 'ಪೆನ್ ಡ್ರೈವ್' ಚಿತ್ರದಲ್ಲಿ ಮಾಡಿದ್ದೆ. ಈ ಚಿತ್ರದ ಮೇಲೆ ನಂಗೆ ಭರವಸೆ ಇದೆ' ಎಂದರು. ವೇದಿಕೆಯಲ್ಲಿ ಕಾರ್ಯಕಾರಿ ನಿರ್ಮಾಪಕ ರಾಟೆ ಕುಮಾರ್, ಛಾಯಾಗ್ರಾಹಕ ಕಿಟ್ಟಿ ಕೌಶಿಕ್, ನಟ ಶೋಭನ್ ಸಿನಿಮಾ ಕುರಿತು ಹೆಚ್ಚಿನ ಮಾಹಿತಿ ನೀಡಿದರು. ವಿಜಯ್ ಗುಮ್ಮಿನೇನಿ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಡಾಗ್ ಸತೀಶ್, ಕಿರಣ್ ಕುಮಾರ್ (ಕಾಂಗ್ರೆಸ್ ಮುಖಂಡರು) ಹಾಗೂ ರಾಜೇಶ್ ಅತಿಥಿಗಳಾಗಿ ಆಗಮಿಸಿದ್ದರು.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 