ರಷ್ಯಾದ ಮೇಲೆ ಯುದ್ದ ಗೆಲ್ಲುವವರೆಗೂ ಕೀವ್ ಬಿಟ್ಟು ಕದಲುವುದಿಲ್ಲ: ಝೆಲನ್ಸ್ಕಿ
ಕೀವ್ : ಮಾರ್ಚ್ 08: ಉಕ್ರೇನ್ ಮೇಲೆ ರಷ್ಯಾ ಮುಂದುವರೆದ್ದೂ ಪ್ರಪಂಚದ ಹಲವು ದೇಶಗಳು ಯಷ್ಯಾಗೆ ಹಲವು ರೀತಿಯ ದಿಗ್ಭಂಧನಗಳನ್ನ ಹಾಕಿದೆ, ಆದರು ತನ್ನ ಮೊಂಡು ವಾದವನ್ನ ಬಿಡದೇ ರಷ್ಯಾ ದಾಳಿಯನ್ನ ನಡೆಸುತ್ತಲೆ ಇದೆ. ರಷ್ಯಾ ಸೇನೆಯೂ ಆಸ್ಪತ್ರೆಗಳು,ನರ್ಸರಿಗಳು,ಸ್ಕೂಲ್ ಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುತ್ತಿದೆ, ನಾಗರಿಕರು ಈ ದಾಳಿಯಿಂದ ಬಳಲುವಂತಾಗಿದೆ.
ಯುದ್ಧದಲ್ಲಿ ಗೆಲ್ಲುವವರೆಗೂ ಕೀವ್ ನಲ್ಲೇ ಇರುವುದುದಾಗಿ ಯುಕ್ರೆನ್ ಅಧ್ಯಕ್ಷ ವೊಲದಿಮೀರ್ ಜೆಲಿಯೆನ್‌ಸ್ಕಿ ಸ್ಪಷ್ಟಪಡಿಸಿದ್ದಾರೆ.”ನಾನು ಬಚ್ಚಿಟ್ಟುಕೊಳ್ಳುವುದಿಲ್ಲ. ನಾನು ಯಾರಿಗೆ ಹೆದರುವುದಿಲ್ಲ. ಈ ಯುದ್ಧದಲ್ಲಿ ಗೆಲ್ಲುವವರೆಗೂ ನಾನಿಲ್ಲಿಯೇ ಇರುತ್ತೇನೆ ” ಎಂದು ಸಂದೇಶ ನೀಡಿ ವೀಡಿಯೊ ಬಿಡುಗಡೆ ಮಾಡಿದ ಝೆಲನ್ಸ್ಕಿ.ಈ ಸಂದೇಶವನ್ನು ಸೋಮವಾರ ಸಂಜೆ ಚಿತ್ರೀಕರಿಸಿದಂತೆ ದಾಖಲೆ ಸಾಬೀತುಪಡಿಸಲು ಜೆಲಿಯೆನ್‌ಸ್ಕೀ ಕಚೇರಿಯಿಂದ ಕಾಣಿಸಿಕೊಂಡ ರಾತ್ರಿ ವೇಳೆ ನಗರ ದೃಶ್ಯಗಳನ್ನು ತೋರಿಸಿದ್ದಾರೆ. ಅವರು ಕಚೇರಿ ಯುಕ್ರೇನ್ ರಾಜಧಾನಿ ಕೀವ್ ನ ನಗರದ ಮಧ್ಯೆದಲ್ಲೆ ಇದೆ.