ಕ್ರೀಡೆ

ಖೇಲೋ ಇಂಡಿಯಾ: 4,500 ಸ್ಪರ್ಧಿಗಳು; 50 ಕೋಟಿಗೂ ಅಧಿಕ ಖರ್ಚು

ಖೇಲೋ ಇಂಡಿಯಾ: 4,500 ಸ್ಪರ್ಧಿಗಳು; 50 ಕೋಟಿಗೂ ಅಧಿಕ ಖರ್ಚು

ಬೆಂಗಳೂರು: ಏಪ್ರಿಲ್ 11: ರಾಜ್ಯದಲ್ಲಿ ಆಯೋಜನೆಗೊಂಡಿರುವ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ  4,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಕ್ರೀಡಾ ಸಚಿವ ಡಾ.ನಾರಾಯಣಗೌಡ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಖೇಲೊ ಇಂಡಿಯಾ ಏಪ್ರಿಲ್ 24 ರಿಂದ ಮೇ 3 ರ ವರೆಗೆ ನಡೆಯಲಿದೆ. 4500 ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಯ್ ಮತ್ತು ಜೈನ್ ಯುನಿವರ್ಸಿಟಿ ಕೂಡ ಈ ಕ್ರೀಡಾಕೂಟಕ್ಕೆ ಸಹಕಾರ ನೀಡಲಿವೆ. ಈ ಕ್ರೀಡಾಕೂಟಕ್ಕೆ ಆಗಮಿಸುವ ಅತಿಥಿಗಳಿಗೆ ಬೆಂಗಳೂರಿನ ಸರ್ಕಾರಿ ಗೆಸ್ಟ್ ಹೌಸ್, ಖಾಸಗಿ ಹೋಟೆಲ್ , ಜೈನ್ ವಿವಿಯಲ್ಲಿ ರೂಮ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಕ್ರೀಡಾಕೂಟಕ್ಕೆ 50 ಕೋಟಿಗೂ ಹೆಚ್ಚು ವೆಚ್ಚವಾಗಲಿದೆ. ಉಪ ರಾಷ್ಟ್ರಪತಿಗಳು ಉದ್ಘಾಟನೆ ಮಾಡಲಿದ್ದಾರೆ. ಪ್ರಧಾನಿ ಅವರನ್ನು ಪಾಲ್ಗೊಳ್ಳಲು ಮನವಿ ಮಾಡಿದ್ದೇವೆ. ಅವರು ಪಾಲ್ಗೊಳ್ಳುವ ವಿಶ್ವಾಸ ಇದೆ ಎಂದು ಸಚಿವರು ತಿಳಿಸಿದರು.

ಬಳಿಕ ಮಾತನಾಡಿದ ಕೇಂದ್ರ ಸರ್ಕಾರದ ಕಾರ್ಯದರ್ಶಿ ಸುಜಾತಾ, ಖೆಲೋ ಇಂಡಿಯಾ ಗೇಮ್ ಅನ್ನು ಶಾಲಾ-ಕಾಲೇಜುಗಳಲ್ಲಿ ಕ್ರೀಡೆಗೆ ಉತ್ತೇಜನ ನೀಡಲು ಈ ಕ್ರಿಡಾಕೂಟ ಏರ್ಪಡಿಸಲಾಗಿದೆ. ಇದು ಎರಡನೇ ಭಾಗವಾಗಿ ಆಯೋಜಿಸಲಾಗಿದೆ. ದೇಶದ 189 ವಿಶ್ವವಿದ್ಯಾಲಯಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. 275 ಗೋಲ್ಡ್ ಮೆಡಲ್ಸ್ ಇವೆ. ಸುಮಾರು 75,000 ಜನರು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜೈನ್ ವಿವಿ, ಕಂಠೀರವ ಕ್ರೀಡಾಂಗಣದಲ್ಲಿ ಸುಮಾರು 20 ಗೇಮ್ ಗಳು ನಡೆಯಲಿವೆ. ಯೋಗ ಮತ್ತು ಮಲ್ಲಕಂಬ ಸೇರ್ಪಪಡೆಯಾಗಿದೆ. ಈ ಕ್ರೀಡಾಕೂಟಕ್ಕೆ 35 ಕೋಟಿ ವೆಚ್ಚವಾಗಲಿದೆ. ಈ ಕ್ರಿಡಾಕೂಟ ಡಿಡಿ, ರೇಡಿಯೊ ಹಾಗೂ ಇತರ ವೆಬ್ ಸೈಟ್ ಗಳಲ್ಲಿ ಲೈವ್ ಪ್ರಸಾರವಾಗಲಿದೆ. ಎಲೆಕ್ಟ್ರಿಕಲ್ ವಾಹನಗಳನ್ನೂ ಸಹ ಸಂಚಾರಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

ಕೇಂದ್ರ ಕ್ರೀಡಾ ಸಚಿವರು ಹಾಗೂ ರಾಜ್ಯಪಾಲರು ಲೊಗೊ ಬಿಡುಗಡೆ ಮಾಡಿದ್ದಾರೆ. ಚಂದನ್ ಶೆಟ್ಟಿ ಹಾಗೂ ನಿಖಿಲ್ ಜೋಶಿ ಅವರ ಆಂಥಮ್ ಸಾಂಗ್ ಇರಲಿದೆ. ಈ ಕ್ರೀಡಾಕೂಟ ಅಂತ್ಯಂತ ಯಶಸ್ವಿಯಾಗುವ ವಿಶ್ವಾವಿದ್ದು, ಈ ಕ್ರೀಡಾಕೂಟ ವೀಕ್ಷಣೆಗೆ ಎಲ್ಲರಿಗೂ ಮುಕ್ತವಾಗಿದೆ ಎಂದು ಕೇಂದ್ರ ಸರಕಾರದ ಕಾರ್ಯದರ್ಶಿ ಸುಜಾತಾ ಹೇಳಿದರು.

ಸುದ್ದಿ ಓದಿ