ಮಕ್ಕಳು ದುಶ್ಚಟಗಳಿಂದ ದೂರವಿದ್ದು, ಸುಂದರ ಪರಿಸರ ನಿರ್ಮಿಸಿ : ಶಿವರಾಜ್
Keep children away from bad habits and create a beautiful environment: Shivaraj
ಮಕ್ಕಳು ದುಶ್ಚಟಗಳಿಂದ ದೂರವಿದ್ದು, ಸುಂದರ ಪರಿಸರ ನಿರ್ಮಿಸಿ : ಶಿವರಾಜ್
ರಾಣೇಬೆನ್ನೂರು 07: ಮಕ್ಕಳು ದುಶ್ಚಟಗಳಿಂದ ದೋರವಿದ್ದು, ಸುಂದರ ಪರಿಸರ ನಿರ್ಮಿಸಿ ಆರೋಗ್ಯವಂತ ಬದುಕು ಕಟ್ಟಿಕೊಳ್ಳಬೇಕು ಇದರಿಂದ ಭವಿಷ್ಯದಲ್ಲಿ ಯಾವುದೇ ರೀತಿಯ ರೋಗ ರುಜಿನಗಳು ಬರುವುದಿಲ್ಲ ಎಂದು ಡಾ. ಶಿವರಾಜ್ ಎನ್. ಹೆಚ್. ಕರೆ ನೀಡಿದರು. ತಾಲೂಕಿನ ಹುಲಿಕಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ, ಮಕ್ಕಳು ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ವಿಷಯ ಕುರಿತು ಮಾತನಾಡಿದರು.ಪ್ರಸ್ತುತ ಸಂದರ್ಭದಲ್ಲಿ ಅನೇಕ ರೋಗ ಯೋಜನೆಗಳಿಗೆ ಬಲಿಯಾಗುತ್ತಿರುವುದಕ್ಕೆ ನಮ್ಮ ಪರಿಸರದಲ್ಲಿ ಇರುವ ಅಸ್ವಚ್ಛತೆಯೇ ಕಾರಣವಾಗಿದೆ. ಡೆಂಗೊ, ಮತ್ತು ಮಲೇರಿಯಾ ರೋಗಗಳಿಂದ, ಸಾವು ಹೆಚ್ಚಳ ಕಂಡುಬರುತ್ತದೆ. ನೀರಿನ ಮೂಲಗಳನ್ನು ಸ್ವಚ್ಛವಾಗಿಟ್ಟುಕೊಂಡು ಮೇಲಿಂದ ಮೇಲೆ ಪಾತ್ರೆ ಪಗಡೆ, ಹಂಡೆ ಡ್ರಮ್ಮು ಮತ್ತಿತರ ನೀರು ಸಂಗ್ರಹಣೆಗಳ ಮೂಲದ ಸಾಮಗ್ರಿಗಳನ್ನು ಪರೀಶೀಲಿಸಿ ಶುದ್ಧಗೊಳಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಮತ್ತೋರ್ವ ಅತಿಥಿ ಡಾ. ಲೋಕೇಶ್ ವೈ. ಆರೋಗ್ಯ ಮತ್ತು ರಕ್ಷಣೆ ಅಂಗೈಯಲ್ಲಿ ಅರಮನೆ ವಿಷಯ ಕುರಿತು ಶಾಲಾ ಮಕ್ಕಳಿಗೆ ಸಾಧ್ಯಂತವಾಗಿ ವಿವರಿಸಿ ಮಾತನಾಡಿದರು. ಕಾರ್ಯಕ್ರಮಕ್ಕೆ ಮುನ್ನ ಗ್ರಾಮದಲ್ಲಿ ಆರೋಗ್ಯ ಜಾಗೃತಿ ಕುರಿತು, ಜನ ಜಾಗೃತಿ ಜಾತಾ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ ಬಣಕಾರ್ ಅವರು ಅಧ್ಯಕ್ಷತೆ ವಹಿಸಿದ್ದರು. ಚಂದ್ರ್ಪ ಬಣಕಾರ್, ರೂಪಾ ಗೊಲ್ಲರ್, ಎಸ್ ಡಿ ಎಂ ಸಿ ಸದಸ್ಯರು, ಪದಾಧಿಕಾರಿಗಳು ಶಾಲಾ ಶಿಕ್ಷಕರು ಗ್ರಾಮದ ಗಣ್ಯರು ಉಪಸ್ಥಿತರಿದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 