ಅಂತರರಾಷ್ಟ್ರೀಯ

ಯುಎಸ್ ಡಿಫೆನ್ಸ್: ಕಶ್ಯಪ್ ಪ್ರಮೋದ್ ಪಟೇಲ್ ಗೆ ಮಹತ್ವದ ಹುದ್ದೆ

ಯುಎಸ್  ಡಿಫೆನ್ಸ್: ಕಶ್ಯಪ್  ಪ್ರಮೋದ್   ಪಟೇಲ್ ಗೆ ಮಹತ್ವದ  ಹುದ್ದೆ

ವಾಷಿಂಗ್ಟನ್, ನವೆಂಬರ್ 11: ಭಾರತೀಯ ಮೂಲದ ಕಶ್ಯಪ್ ಪ್ರಮೋದ್ ಪಟೇಲ್ (ಕಾಶ್ ಪಟೇಲ್) ಅವರನ್ನು ಅಮೆರಿಕಾ  ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರಿಗೆ  ಸಿಬ್ಬಂದಿಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಈ  ಸಂಬಂಧ ಪೆಂಟಗಾನ್ ಹೇಳಿಕೆ ನೀಡಿದೆ. ಅಮೆರಿಕಾ  ರಕ್ಷಣಾ ಕಾರ್ಯದರ್ಶಿ  ಮಾರ್ಕ್ ಎಸ್ಪರ್ ಅವರನ್ನು  ಅಧ್ಯಕ್ಷ  ಡೋನಾಲ್ಡ್  ಟ್ರಂಪ್ ವಜಾಗೊಳಿಸಿದ  ಒಂದು ದಿನದ ನಂತರ ಈ ನೇಮಕ ಮಾಡಲಾಗಿದೆ. ‘ನಾವು ಮಾರ್ಕ್ ಎಸ್ಪರ್  ಅವರನ್ನು   ವಜಾಗೊಳಿಸಿದ್ದೇವೆ. ಅವರು ದೇಶಕ್ಕೆ ಸಲ್ಲಿಸಿರುವ  ಸೇವೆಗಳಿಗೆ ಧನ್ಯವಾದಗಳು  ಎಂದು ಟ್ರಂಪ್  ಸಂಚಲನ ನಿರ್ಣಯ ಕೈಗೊಂಡಿದ್ದರು.

ಈ  ಹಿನ್ನೆಲೆಯಲ್ಲಿ ಮಾರ್ಕ್  ಅವರ  ಸ್ಥಾನದಲ್ಲಿ  ಕ್ರಿಸ್ ಮಿಲ್ಲರ್ ಸೋಮವಾರ ಅಧಿಕಾರ ವಹಿಸಿಕೊಂಡರು. ಜೇನ್ ಸ್ಟೀವರ್ಟ್ ಅವರ ಸ್ಥಾನಕ್ಕೆ  ಇಂಡೋ-ಅಮೆರಿಕನ್ ಕಶ್ಯಪ್ ಪಟೇಲ್  ಅವರನ್ನು  ನೇಮಿಸಲಾಗಿದೆ.

ಪಟೇಲ್ ಈ ಹಿಂದೆ ಶ್ವೇತಭವನದ ಖಾಯಂ ಆಯ್ಕೆ ಸಮಿತಿಯಲ್ಲಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹದ  ಹಿರಿಯವಕೀಲರಾಗಿ ಸೇವೆ ಸಲ್ಲಿಸಿದ್ದರು. ಅವರು 2019 ರ ಜೂನ್‌ನಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ (ಎನ್‌ಎಸ್‌ಸಿ) ಹಿರಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು.

ನ್ಯೂಯಾರ್ಕ್ ನಲ್ಲಿ  ಜನಿಸಿದ ಕಶ್ಯಪ್ ಪಟೇಲ್ ಭಾರತದ   ಗುಜರಾತ್ ಮೂಲದವರಾಗಿದ್ದಾರೆ.  ಅವರ ಪೋಷಕರು ಪೂರ್ವ ಆಫ್ರಿಕಾಗೆ ಸೇರಿದವರು. 1970 ರಲ್ಲಿ ಕೆನಡಾದಿಂದ ಬಂದು ಅಮೆರಿಕದ ನ್ಯೂಯಾರ್ಕ್‌ನಲ್ಲಿ ನೆಲೆಸಿದರು. ಶಾಲೆಯ ನಂತರ ಫ್ಲೋರಿಡಾದಲ್ಲಿ  ಉನ್ನತ  ವಿಷಯದಲ್ಲಿ  ಅಧ್ಯಯನ  ನಡೆಸಿದ  ನಂತರ ಕಶ್ಯಪ್ ಪಟೇಲ್ ವಾಷಿಂಗ್ಟನ್ ಡಿ.ಸಿ.ಯಲ್ಲಿ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸಿದ್ದರು.  ನಂತರ  ಅವರು ಪೂರ್ವ ಆಫ್ರಿಕಾ, ಕೀನ್ಯಾ  ಹಾಗೂ  ಅಮೆರಿಕಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಈ  ಕ್ರಮವಾಗಿ  ಸರ್ಕಾರ  ಅವರನ್ನು  ರಕ್ಷಣಾ ಇಲಾಖೆಯ ವಿಶೇಷ ಕಾರ್ಯಾಚರಣೆ ಕಮಾಂಡೋ ಸದಸ್ಯರನ್ನಾಗಿ ನೇಮಿಸಿತ್ತು.

ಸುದ್ದಿ ಓದಿ