ಕಾರಿಸಿದ್ದಪ್ಪ ಹನುಮಪ್ಪ ಚಿಕ್ಕವಡ್ಡಟ್ಟಿ ನಿಧನ
ಮುಂಡರಗಿ 12: ತಾಲೂಕಿನ ಕಲಕೇರಿ ಗ್ರಾಮದ ಹಾಲುಮತ ಸಮಾಜದ ಮುಖಂಡ ಕಾರಿಸಿದ್ದಪ್ಪ ಹನುಮಪ್ಪ ಚಿಕ್ಕವಡ್ಡಟ್ಟಿ(56) ತೀವ್ರವಾದ ಹೃದಯಾಘಾತದಿಂದ ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂಡರಗಿ ಪಟ್ಟಣದಲ್ಲಿ ನಿಧನರಾದರು.
ಮೃತರಿಗೆ ತಾಯಿ, ಪತ್ನಿ, ಮಗ, ಸಹೋದರರು, ಸಹೋದರಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಅಂತ್ಯಕ್ರೀಯೆ ಸೆ.12ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಕಲಕೇರಿ ಗ್ರಾಮದಲ್ಲಿ ನೇರವೇರಲಿದೆ.