ಬಾರ್ ಗೆ ಬಂದ ಕಾಂಗರೂ!; ಜನರ ವರ್ತನೆಗೆ ಅಚ್ಚರಿ!
ಕ್ಯಾನ್ ಬೆರಾ: ಏಪ್ರಿಲ್ 25: ಸಾಮಾನ್ಯವಾಗಿ ಬಾರ್ ಗೆ ಇದ್ದಕ್ಕಿದ್ದಂತೆ ಪ್ರಾಣಿಯೊಂದು ನುಗ್ಗಿಬಿಟ್ರೆ ಜನರೆಲ್ಲಾ ಹೇಗೆ ಪ್ರತಿಕ್ರಿಯಿಸ್ತಾರೆ? ಗಾಬರಿಗೊಳ್ಳೋದು, ಚೀರಿಕೊಳ್ಳುವುದು ಇಲ್ಲವೇ ಅಚ್ಚರಿ ಪಡುವುದು ಸಾಮಾನ್ಯ. ಆದರೆ ಆದರೆ ಆಸ್ಟ್ರೇಲಿಯಾದಲ್ಲಿ ಬಾರ್ ಗೆ ಬಂದ ಅದೊಂದು ಪ್ರಾಣಿಯನ್ನ ನೋಡಿ ಜನ ಏನ್ ಮಾಡಿದ್ರು ಗೊತ್ತಾ?
ಆಸ್ಟ್ರೇಲಿಯಾದಲ್ಲಿ ತೆಗೆದ ಅದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಬಾರ್‌ಗೆ ಕಾಂಗರೂ ಪ್ರವೇಶಿಸುವುದನ್ನು ನೋಡಬಹುದು. ಆದರೆ ಜನ ಮಾತ್ರ ಆ ಪ್ರಾಣಿಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಾಡಿಗೆ ತಾವು ಇದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ. ಕಾಂಗರೂಗಳು ಆಸ್ಟ್ರೇಲಿಯಾದಲ್ಲಿ ಸ್ಥಳೀಯ ಪ್ರಾಣಿಗಳಾಗಿವೆ. ಆದ್ದರಿಂದ ಸ್ಥಳೀಯರು ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿಯನ್ನ ನೋಡಿಯೂ ಸಾಮಾನ್ಯವೆಂಬಂತೆ ವರ್ತಿಸಿದ್ದಾರೆ. ಆದರೆ ಈ ವಿಡಿಯೋ ಭಾರೀ ವೈರಲ್ ಆಗಿದ್ದ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ.
ವೀಡಿಯೊದಲ್ಲಿ ಕಾಂಗರೂ ಬಾರ್‌ಗೆ ಪ್ರವೇಶಿಸಿ ಶೀಘ್ರದಲ್ಲೇ ಅದು ಹೊರಬರುತ್ತದೆ.
ವೀಡಿಯೋಗೆ ಕೆಲವರು “ಅನಿರೀಕ್ಷಿತ ಸಂದರ್ಶಕ” ಎಂದು ಶೀರ್ಷಿಕೆ ನೀಡಿದ್ದಾರೆ.ಬಾರ್‌ನಲ್ಲಿದ್ದ ಜನರ ವರ್ತನೆಯು ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಆಶ್ಚರ್ಯಗೊಳಿಸಿದೆ.