ಪ್ರಧಾನಿ ಮೋದಿ ಭೇಟಿ ಮಾಡಿದ ಕಮಲಾ ಹ್ಯಾರಿಸ್
ವಾಷಿಂಗ್ಟನ್, ಸೆ 24 ಪ್ರಸ್ತುತ ಮೂರು ದಿನಗಳ ಅಮೆರಿಕಾ ಭೇಟಿಯಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಈ ಭಾಗವಾಗಿ ಶುಕ್ರವಾರ ಅವರು ಮೊದಲ ಬಾರಿಗೆ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಭೇಟಿಯಾದರು. ಭಾರತೀಯ ಮೂಲದ ಕಮಲಾ ಹ್ಯಾರಿಸ್, ಭಾರತ ಪ್ರಧಾನಿ ಅವರನ್ನು ಭೇಟಿ ಯಾಗಿದ್ದು ಆಸಕ್ತಿದಾಯಕವಾಗಿತ್ತು. ಈ ಸಂದರ್ಭದಲ್ಲಿ ಇಬ್ನರೂ ನಾಯಕರ ನಡುವೆ ಹಲವು ದ್ವಿಪಕ್ಷೀಯ ಚರ್ಚೆ ನಡೆಯಿತು. ಕೊರೊನಾ ಲಸಿಕೆ, ಭಯೋತ್ಪಾದನೆ ಮತ್ತಿತರ ವಿಷಯಗಳನ್ನು ಚರ್ಚಿಸಿದರೆಂದು ತಿಳಿದುಬಂದಿದೆ.
ಮೂರು ದಿನಗಳ ಭೇಟಿಯ ಭಾಗವಾಗಿ ಪ್ರಧಾನಿ ಮೋದಿ ಗುರುವಾರ ಪ್ರಮುಖ ಕಂಪನಿಗಳ ಸಿಇಓಗಳನ್ನು ಭೇಟಿಯಾದರು. ಮೋದಿ ಆಸ್ಟ್ರೇಲಿಯಾ, ಜಪಾನ್ ಪ್ರಧಾನಿಗಳನ್ನೂ ಭೇಟಿಯಾಗಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಕೆಲವೇ ಗಂಟೆಗಳಲ್ಲಿ ಪ್ರಧಾನಿ ಭೇಟಿಯಾಗಲಿದ್ದಾರೆ. ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಅಂಶಗಳ ಜೊತೆಗೆ ಅಂತರಾಷ್ಟ್ರೀಯ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ.