ಕಲ್ಲೋಳಿ: ಜೈ ಹನುಮಾನ ವೃತ್ತದ ಉದ್ಘಾಟನೆ
ಮೂಡಲಗಿ 17: ತಾಲ್ಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಜೈ ಹನುಮಾನ ಯುವಜನ ಸೇವಾ ಸಂಘಜವತಿಯಿಂದ ಜೈ ಹನುಮಾನ ವೃತದ ಉದ್ಘಾಟನಾ ಸಮಾರಂಭ ಜರುಗಿತು.
ಕಲ್ಲೋಳಿಯ ಸತ್ಯ ಸಾಯಿ ಸೇವಾ ಸಮೀತಿಯ ಸುರೇಶ ಕಬ್ಬೂರ ಮಾತನಾಡಿ, ಕಲ್ಲೋಳಿಯಲ್ಲಿ ಹಣಮಂತ ದೇವರ ಹೆಸರಿನಲ್ಲಿ ವೃತವನ್ನು ನಿರ್ಮಾಣ ಮಾಡಿರುವ ಕಾರ್ಯಯವನ್ನು ಶ್ಲಾಘಿಸಿದರು.
ರಾಜು ದಬಾಡಿ ಮಾತನಾಡಿ ಜೈ ಹನುಮಾನ ಯುವಜನ ಸೇವಾ ಸಂಘದ ಸಾಮಾಜಿಕ ಕಾರ್ಯಗಳು ಯಶ್ವಸಿಯಾಗುತ್ತಿದೆ ಎಂದ ಅವರು ಕಲ್ಲೋಳಿ ಪಟ್ಟಣ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದರು.
ಮಲ್ಲಯ್ಯ ಮಠಪತಿ ಮಾತನಾಡಿ, ಇಲ್ಲಿಯವರೆಗೆ ಯಾವು ಸಂಘ ಸಂಸ್ಥೆಗಳು ಮಾಡದ ಕೆಲಸವನ್ನು ಜೈ ಹನುಮಾನ ಯುವಜನ ಸೇವಾ ಸಂಘದವರು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಸಂಘದ ಅಧ್ಯಕ್ಷ ಪರಶುರಾಮ ಇಮಡೇರ ಮಾತಾನಾಡಿ, ಉತ್ತರ ಕರ್ನಾಟಕದಲ್ಲಿ ಹೆಸರು ವಾಸಿಯಾದ ದೇವಸ್ಥಾನ ಕಲ್ಲೋಳಿಯ ಹಣಮಂತ ದೇವರು ಅದಕ್ಕೆ ನಾಡಿನಾದ್ಯಂತ ಜನರು ನಮ್ಮ ಕಲ್ಲೋಳಿ ಪಟ್ಟಣವನ್ನು ದೇವರ ಕಲ್ಲೋಳಿ ಎಂದು ಕರೆಯುತ್ತಾರೆ, ಮತ್ತು ನಮ್ಮ ಊರಿನಲ್ಲಿ ದೇವಾನ ದೇವತೆಗಳು ತುಂಬಿದ ದೇದಸ್ಥಾನಗಳು ಇವೆ. ಅದರಲ್ಲಿ ದಿನನಿತ್ಯ ಎರಡು ಕೇಂದ್ರಗಳಲ್ಲಿ ಓಂಕಾರ ಜಪ, ಶಿವನ ನಾಮಸ್ಮರಣೆ ನಡೆಯುತ್ತ ಬಂದಿದೆ ಎಂದರು.
ಯಲ್ಲಾಲಿಂಗ ಮಠದ ಪೀಠಾಧಿಪತಿ ಮಾತೋಶ್ರೀ ಅಕ್ಕಮಹಾದೇವಿ, ಸಂಘದ ಉಪಾದ್ಯಕ್ಷ ಮಹಾಂತೇಶ ಕಡಲಗಿ, ರಾಜಪ್ಪಾ ಮಾವರಕರ, ಸಿದ್ದಪ್ಪ ಪೂಜೇರಿ, ಹಣಮಂತ ತೋಟಗಿ, ಅನಿಲ ಖಾನಗೌಡ್ರ, ನಾಗರಾಜ ಕಲಾಲ, ಸುರೇಶ ಕಲಾಲ, ರಾಮಣ್ಣಾ ಕಾಡದವರ, ಭೀಮಶಿ ಕಡಲಗಿ, ಭೀಮಶಿ ಗೋಕಾಂವಿ ಹಾಗೂ ಕಲ್ಲೋಳಿ ಪಟ್ಟಣದ ಪ್ರಮುಖರು ಇದ್ದರು.