ವಿಜಯಪುರ

ಇಂದಿನಿಂದ ಕಡಣಿ ಭೋಗೇಶ್ವರ ಜಾತ್ರೆ

ಇಂದಿನಿಂದ ಕಡಣಿ ಭೋಗೇಶ್ವರ ಜಾತ್ರೆ


     ಆಲಮೇಲ, 24 : ತಾಲ್ಲೂಕಿನ ಕಡಣಿ ಗ್ರಾಮದ ಭೋಗಲಿಂಗೇಶ್ಚರ ಜಾತ್ರೆಯು ಮಾ.25ರಿಂದ 27ರ ವರೆಗೆ ನಡೆಯಲಿದೆ ಎಂದು ಜಾತ್ರಾ ಕಮೀಟಿ ತಿಳಿಸಿದೆ. 12ನೇ ಶತಮಾನದ  ವಚನಕಾರ ಕೆಂಭಾವಿ ಭೋಗಣ್ಣ ಅಂತಿಮ ದಿನಗಳನ್ನು ಕಡಣಿ ಗ್ರಾಮದ ಭೀಮಾತಟದಲ್ಲಿ ಕಳೆದನೆಂದು ಹೇಳಲಾಗಿದೆ. ಅಲ್ಲಿ ವಿಶಾಲವಾದ ಭವ್ಯ ದೇಗುಲವಿದ್ದು ಪ್ರತಿವರ್ಷ ಯುಗಾದಿ ಅಮಾವಾಸ್ಯೆಯ 7ನೇ ದಿನದಿಂದ ಉತ್ಸವ ನಡೆಯುತ್ತದೆ.ಮಾರ್ಚ 4ರಿಂದ ಆರಂಭವಾದ ಶರಣಬಸವೇಶ್ವರ ಪುರಾಣವು  ಮಹಾಮಂಗಲಗೊಳ್ಳುವದರಿಂದ ಜಾತ್ರೆಯು ನಡೆಯುತ್ತದೆ ಎಂದು ಕಮೀಟಿಯ ಸಂತೋಷ ಕ್ಷತ್ರಿ ತಿಳಿಸಿದ್ದಾರೆ. 

    ಕುಂಭಾಭಿಷೇಕ: ಮಾರ್ಚ 25ರಂದು ಬೆಳಿಗ್ಗೆ ಸಹಸ್ರಾರು ಸುಮಂಗಲೆಯರಿಂದ ಕುಂಭಾಭಿಷೇಕ ನಡೆಯಲಿದೆ, ನಂತರ ಲಿಂಗಕ್ಕೆ ಬಿಲ್ವಾರ್ಚನೆ, ಧಾರ್ಮಿಕ ಆಚರಣೆಗಳು ನಡೆಯುತ್ತವೆ.ಪಲ್ಲಕ್ಕಿ ಉತ್ಸವ: 26ರಂದು ರಾತ್ರಿ 8ಕ್ಕೆ ಭೋಗೇಶ್ವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ  ಭವ್ಯ ಮೆರವಣಿಗೆ ನಡೆಯುತ್ತದೆ, ವಿವಿಧ ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿದ್ದು, ಪುರವಂತರು ಧಾರ್ಮಿಕ ಕೈಂಕರ್ಯದಲ್ಲಿ ಸೇವೆ ಸಲ್ಲಿಸುವರು. 

    ಸುತ್ತಲಿನ ಹಳ್ಳಿಗಳ ಜನರು ಭಾಗವಹಿಸುವರು.ರಥೋತ್ಸವ: ಮಾರ್ಚ್‌ 27ರಂದು ಸಂಜೆ ರಥೋತ್ಸವ ಜರುಗಲಿದ್ದು, ಅಂದು ಮಧ್ಯಾಹ್ನ 11 ಸಾಮೂಹಿಕ ವಿವಾಹ ಹಾಗೂ ಧಾರ್ಮಿಕ ಸಭೆಯು ನಾಡಿನ ವಿವಿಧ ಸ್ವಾಮೀಜಿಗಳ ಸಾನಿಧ್ಯದಲ್ಲಿ ಜರಗಲಿದೆ  ಶಿವು ಬಿರಾದಾರ ಹೇಳಿದರು. 

   ಅಂದು ಸಂಜೆ ಮಹಾರಾಷ್ಟ್ರ ಕರ್ನಾಟಕ ಜಂಗೀ ಪೈಲ್ವಾನ್ ರಿಂದ ಕುಸ್ತಿಗಳು ನಡೆಯುತ್ತವೆದನಗಳ ಜಾತ್ರ: ಪ್ರತಿವರ್ಷದಂತೆ ಈ ವರ್ಷವು ದನಗಳ ಜಾತ್ರೆ ಆಯೋಜಿಸಲಾಗಿದ್ದು, ರಾಸುಗಳಿಗೆ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

   ಬುಧವಾರ ಕುಂಭಾ ಅಭಿಷೇಕ ಗುರುವಾರ ಶ್ರೀ ಭೋಗಲಿಂಗೇಶ್ವರ ಅಡ್ಡ ಪಲ್ಲಯ್ಕೋತ್ಸವ. ಶುಕ್ರವಾರ ಸಾಮೂಹಿಕ  ವಿವಾಹ ಹಾಗೂ ಧರ್ಮಸಭೆ ಹಾಗೂ ಕುಸ್ತಿಗಳು ಇರುವವು.  ಶ್ರೀ. ಶಿವು ಬಿರಾದಾರ  ಶ್ರೀ ಭೋಗಲಿಂಗೇಶ್ವರ ಜಾತ್ರೆಯ ಕಮಿಟಿ ಸದಸ್ಯರು ಲೋಕದರ್ಶನ ಪತ್ರಿಕೆಗೆ   ತಿಳಿಸಿದರು. 


ಸುದ್ದಿ ಓದಿ