ಅಂತರರಾಷ್ಟ್ರೀಯ

ಭಾರತದಲ್ಲಿಯೇ ಪ್ರಶಾಂತವಾಗಿರಲು ಬಯಸಿದ್ದೇನೆ; ದಲೈಲಾಮಾ

ಭಾರತದಲ್ಲಿಯೇ ಪ್ರಶಾಂತವಾಗಿರಲು  ಬಯಸಿದ್ದೇನೆ;  ದಲೈಲಾಮಾ

ಟೋಕಿಯೊ, ನ 11:  ಧಾರ್ಮಿಕ  ಸೌಹಾರ್ದತೆಯ  ಕೇಂದ್ರ ಬಿಂದುವಾಗಿರುವ  ಭಾರತದಲ್ಲಿಯೇ   ಪ್ರಶಾಂತವಾಗಿ  ಇರಲು  ಬಯಸುವುದಾಗಿ    ಬೌದ್ಧರ  ಆಧ್ಯಾತ್ಮಿಕ    ಗುರು    ದಲೈಲಾಮಾ  ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ವಿಭಿನ್ನ ಸಂಸ್ಕೃತಿಗಳ ಪ್ರಾಮುಖ್ಯತೆಯನ್ನು  ಚೀನಾದ  ನಾಯಕರು   ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ,  ಸಮಾಜವನ್ನು ಕಠಿಣವಾಗಿ ನಿಯಂತ್ರಿಸಲು  ಆ  ದೇಶದ ಕಮ್ಯುನಿಸ್ಟ್ ಸರ್ಕಾರ ಅನುಸರಿಸುತ್ತಿರುವ ನೀತಿಗಳು ಹಾನಿಕಾರಕವಾಗಿದೆ ಎಂದು ಅವರು ಹೇಳಿದ್ದಾರೆ.  ಟೋಕಿಯೊ ವಿದೇಶಿ ವರದಿಗಾರರ ಕ್ಲಬ್ ಆನ್‌ಲೈನ್‌ನ ಸಭೆಯಲ್ಲಿ ಅವರು ಬುಧವಾರ ಮಾತನಾಡಿದರು.   

ಈ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ  ಹಲವು ಪ್ರಶ್ನೆಗಳಿಗೆ  ದಲೈಲಾಮಾ ಉತ್ತರಿಸಿದರು. ಟಿಬೆಟ್‌ನಲ್ಲಿ ಚೀನಾ  ಆಡಳಿತದ ವಿರುದ್ಧ ಬಂಡಾಯ  ವಿಫಲವಾದ   ಹಿನ್ನೆಲೆಯಲ್ಲಿ   ಅವರು 1959 ರಿಂದ ಭಾರತದಲ್ಲಿದ್ದಾರೆ. "ಸಾಮಾನ್ಯ ಬೌದ್ಧ ಸನ್ಯಾಸಿ  ರಾಜಕೀಯದಲ್ಲಿ  ಹಸ್ತಕ್ಷೇಪ ಮಾಡಬಾರದು  ಎಂದು  ನಾನು ಭಾವಿಸುತ್ತೇನೆ.  ಅದಕ್ಕಾಗಿಯೇ  ಸ್ಥಳೀಯ, ರಾಜಕೀಯ ಸಂಕೀರ್ಣತೆಗಳ ಭಾಗವಾಗಲು ಇಷ್ಟವಿಲ್ಲ.  ಚೀನಾದಲ್ಲಿ ವಿವಿಧ ಜನಾಂಗೀಯ ಗುಂಪುಗಳಿದ್ದರೂ ... ಹಾನ್ ಸಮುದಾಯ  ಹೆಚ್ಚು ಪ್ರಾಬಲ್ಯ, ನಿಯಂತ್ರಣಹೊಂದಿದೆ   ಇದು ಸತ್ಯ  ಎಂದು  ಸ್ಪಷ್ಟಪಡಿಸಿದರು.

ಕಮ್ಯುನಿಸಂ,  ಮಾರ್ಕ್ಸ್‌ವಾದದ   ಆಲೋಚನೆಗಳ  ಪರವಾಗಿದ್ದೇನೆ.  ಒಂದು ಹಂತದಲ್ಲಿ   ನಾನು   ಕಮ್ಯುನಿಸ್ಟ್ ಪಕ್ಷ   ಸೇರಲು ಬಯಸಿದ್ದೆ,  ಆದರೆ,      ಮಿತ್ರನೊಬ್ಬ  ಆಕ್ಷೇಪ ವ್ಯಕ್ತಪಡಿಸಿದಾಗ ಆಲೋಚನೆಯಿಂದ  ದೂರ ಸರಿದೆ.   ಚೈನಾ ದಿಂದ  ತೈವಾನ್‌    ಸಾಕಷ್ಟು ಆರ್ಥಿಕ ನೆರವು ಪಡೆದುಕೊಳ್ಳುತ್ತಿದೆ.  ಬೌದ್ಧಧರ್ಮ,  ಸಂಸ್ಕೃತಿ ವಿಷಯಕ್ಕೆ ಬಂದಾಗ ... ಚೀನೀ ಜನರು ತೈವಾನ್‌ನಿಂದ ಕಲಿಯುವುದು  ಬಹಳಷ್ಟು ಇದೆ.  

ಸರ್ವಧರ್ಮದ ಸಾರವೂ  ಒಂದೇ..   ಆದರೆ, ಸಮಸ್ಯೆಗಳು  ಸೃಷ್ಟಿಯಾಗುತ್ತಿರುವುದು   ರಾಜಕಾರಣಿಗಳಿಂದ. ಅವರು ಧರ್ಮವನ್ನು ರಾಜಕೀಯಕ್ಕೆ ಬಳಸಿಕೊಂಡು   ದೊಡ್ಡ ಸವಾಲಾಗಿ ಪರಿವರ್ತಿಸಿದ್ದಾರೆ.  ಬೌದ್ಧ ಧರ್ಮ ದೃಢವಾಗಿ ಬೇರೂರಿರುವ ತೈವಾನ್,  ನಾಸ್ತಿಕತೆ ಪ್ರಚಲಿತದಲ್ಲಿರುವ  ಚೀನಾ  ನಡುವಣ  ರಾಜಕೀಯ ಬಿಕ್ಕಟ್ಟಿನಲ್ಲಿ  ತಲೆಹಾಕುವುದಿಲ್ಲ.  ಬದಲಿಗೆ... ಧಾರ್ಮಿಕ ಸೌಹಾರ್ದತೆಯ ಕೇಂದ್ರವಾದ ಭಾರತದಲ್ಲಿ ಶಾಂತಿಯಿಂದ ಇರಲಿದ್ದೇನೆ.    ಟಿಬೆಟ್ ತನ್ನ ಸ್ವಾಯತ್ತತೆ,    ಬೌದ್ಧ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕಾಗಿದೆ.   ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುವ ಯಾವುದೇ ಯೋಜನೆ  ಇಲ್ಲ.   ಆದರೆ  ಹಿಮಾಲಯದಲ್ಲಿರುವ ನನ್ನ ಹುಟ್ಟೂರಿಗೆ  ತೆರಳಿ   ಹಳೆಯ ಸ್ನೇಹಿತರ  ಭೇಟಿಯಾಗಲು ಬಯಸುತ್ತೇನೆ, ”ಎಂದು 86 ವರ್ಷದ ದಲೈ ಲಾಮಾ ತಮ್ಮ ಮನದ ಆಸೆಯನ್ನು  ಹಂಚಿಕೊಂಡರು.  ಮೂರನೇ ಅವಧಿಗೆ  ಚೀನಾ  ಅಧ್ಯಕ್ಷರಾಗಲು ಜಿನ್‌ಪಿಂಗ್   ಪ್ರಯತ್ನದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.


ಸುದ್ದಿ ಓದಿ