ಅಂತರರಾಷ್ಟ್ರೀಯ

ಜಪಾನ್‌ ಹೊಸ ಪ್ರಧಾನಿ ಫ್ಯೂಮಿಯೊ ಕಿಶಿದಾ

ಜಪಾನ್‌  ಹೊಸ   ಪ್ರಧಾನಿ  ಫ್ಯೂಮಿಯೊ ಕಿಶಿದಾ

ಟೋಕಿಯೊ, ಸೆ 29 ಮಾಜಿ   ವಿದೇಶಾಂಗ ಸಚಿವ  ಫ್ಯೂಮಿಯೊ ಕಿಶಿದಾ ಜಪಾನ್‌ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.  64 ವರ್ಷದ ಫ್ಯೂಮಿಯೊ ಕಿಶಿದಾ   ದೇಶದ   ಆಡಳಿತ ಪಕ್ಷದ ನಾಯಕರಾಗಿ    ಆಯ್ಕೆಯಾಗಿದ್ದಾರೆ.    ಹಾಲಿ    ಪ್ರಧಾನಿ ಯೋಷಿ ಹಿಡೆ ಸುಗಾ   ಅವರಿಂದ   ಸಧ್ಯದಲ್ಲಿಯೇ    ಅಧಿಕಾರ  ವಹಿಸಿಕೊಳ್ಳಲಿದ್ದಾರೆ.     ಆಡಳಿತಾರೂಢ  ಪಕ್ಷದ   ಚುನಾವಣೆಯಲ್ಲಿ, ಕಿಶಿಡಾ ಅವರಿಗೆ  257 ಮತ ಲಭಿಸಿದರೆ, ಕೊನೊ   170 ಮತಗಳನ್ನು ಪಡೆದರು.
ಜನಪ್ರಿಯ   ನಾಯಕ     ಟಾರೊ  ಕೊನೊ ಅವರನ್ನು ಮಣಿಸುವ   ಮೂಲಕ ಫ್ಯೂಮಿಯೊ ತಮ್ಮ  ಬಹುಕಾಲದ ಕನಸು  ಈಡೇರಿಸಿಕೊಂಡಿದ್ದಾರೆ.  ಪ್ರಧಾನಿಯಾದ  ಒಂದು ವರ್ಷದ ನಂತರ   ಸುಗಾ  ಅಧಿಕಾರ ತ್ಯಜಿಸಲಿದ್ದಾರೆ.  ಕಳೆದ ಎರಡು ದಶಕಗಳಿಂದ ಜಪಾನಿನ ರಾಜಕೀಯದ  ಮೇಲೆ  ಪ್ರಾಬಲ್ಯ ಹೊಂದಿರುವ ನವ-ಉದಾರವಾದಿ ಆರ್ಥಿಕ ನೀತಿಗಳಿಂದ ದೂರವಿರುವ,   ದೇಶದಲ್ಲಿ ಆದಾಯ ಅಸಮಾನತೆ ಹೋಗಲಾಡಿಸುವ ಭರವಸೆ ನೀಡಿದ್ದಾರೆ.  ಕೊರೊನಾ  ಸಾಂಕ್ರಾಮಿಕ  ಪರಿಸ್ಥಿತಿಯಿಂದ  ದೇಶವನ್ನು  ಹೊರತರಲು  ಫ್ಯೂಮಿಯೊ   ದೊಡ್ಡ ಉತ್ತೇಜಕ ಪ್ಯಾಕೇಜ್  ಭರವಸೆ ನೀಡಿದ್ದಾರೆ.
 ಹಿರೋಷಿಮಾ ರಾಜಕಾರಣ ಹಿನ್ನಲೆಯ   ಕುಟುಂಬದ    ಮೃದು  ಸ್ಭಭಾವಿ,  ಬೇಸ್‌ಬಾಲ್   ಪ್ರೇಮಿ ಫ್ಯೂಮಿಯೊ   ಈ  ಹಿಂದೆ   ಲಿಬರಲ್ ಡೆಮಾಕ್ರಟಿಕ್ ಪಕ್ಷದ ನೀತಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು.  2012-17ರ ನಡುವೆ ವಿದೇಶಾಂಗ ಸಚಿವರಾಗಿಯೂ ಸೇವೆ ಸಲ್ಲಿಸಿದರು, ಈ ಸಮಯದಲ್ಲಿ ಅವರು ರಷ್ಯಾ,  ದಕ್ಷಿಣ ಕೊರಿಯಾದೊಂದಿಗೆ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಿದ್ದರು.   ಪರಮಾಣು ಶಸ್ತ್ರಾಸ್ತ್ರಗಳ ನಿರ್ಮೂಲನೆಯೇ  ತಮ್ಮ  ಜೀವನದ ಆಸೆ  ಎಂದೂ ಅವರು ಘೋಷಿಸಿದ್ದರು.  ಈ ಹಿನ್ನಲೆಯಲ್ಲಿ   2016 ರಲ್ಲಿ, ಆಗಿನ ಅಧ್ಯಕ್ಷ ಬರಾಕ್ ಒಬಾಮ ಅವರು ಹಿರೋಶಿಮಾಕ್ಕೆ ಐತಿಹಾಸಿಕ ಭೇಟಿಗೆ ಕೊಡುಗೆ ನೀಡಿದ್ದರು.


ಸುದ್ದಿ ಓದಿ