ಅಂತರರಾಷ್ಟ್ರೀಯ

ದುಬೈ ನೊಂದಿಗೆ ಜಮ್ಮು ಕಾಶ್ಮೀರ ಒಪ್ಪಂದ .. ಪಾಕಿಸ್ತಾನಕ್ಕೆ ಹಿನ್ನಡೆ ?

ದುಬೈ ನೊಂದಿಗೆ  ಜಮ್ಮು ಕಾಶ್ಮೀರ ಒಪ್ಪಂದ .. ಪಾಕಿಸ್ತಾನಕ್ಕೆ ಹಿನ್ನಡೆ ?

ಶ್ರೀನಗರ   ಅ 21: ಮೂಲ   ಸೌಕರ್ಯಗಳಿಗೆ  ಸಂಬಂಧಿಸಿದಂತೆ   ಜಮ್ಮು -  ಕಾಶ್ಮೀರ  ಆಡಳಿತ,     ದುಬೈ   ಆಡಳಿತದೊಂದಿಗೆ   ತಿಳುವಳಿಕೆ  ಒಪ್ಪಂದವೊಂದಕ್ಕೆ  ಸಹಿ ಹಾಕಿದೆ.    ಕಾಶ್ಮೀರ  ಕಣಿವೆಯಲ್ಲಿ  ನಿತ್ಯ   ಹಿಂಸಾಚಾರ   ಮುಂದುವರಿದಿರುವ      ಹಿನ್ನಲೆಯಲ್ಲಿ     ಈ   ಒಪ್ಪಂದ  ಅತ್ಯಂತ    ಮಹತ್ವದ್ದು ಎಂದು  ಪರಿಗಣಿಸಲಾಗಿದೆ.

ಇದು  ಪಾಕಿಸ್ತಾನಕ್ಕೆ   ತೀವ್ರ    ಹಿನ್ನಡೆ    ಎಂದು ಪಾಕಿಸ್ತಾನದ ರಾಜತಾಂತ್ರಿಕರು ಹೇಳುತ್ತಾರೆ.   ಇಸ್ಲಾಮಿಕ್  ದೇಶದ   ಯು ಎ ಇ  ನಲ್ಲಿ   ದುಬೈ ಕೂಡ  ಒಂದು ಭಾಗವಾಗಿದೆ.  ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನ   ಇಸ್ಲಾಮಿಕ್ ಸಂಬಂಧಗಳನ್ನು  ಮುಂಚೋಣಿಗೆ  ತರುವ     ಮೂಲಕ   ಭಾರತದ ವಿರುದ್ಧ   ಇಸ್ಲಾಮಿಕ್‌  ದೇಶಗಳ ಬೆಂಬಲ   ಒಟ್ಟುಗೂಡಿಸಲು ಪ್ರಯತ್ನಿಸುತ್ತಿದೆ .  ಆದರೆ   ಈವರೆಗೆ  ಈ  ನಿಟ್ಟಿನಲ್ಲಿ ಪಾಕಿಸ್ತಾನ   ಯಶಸ್ವಿಯಾಗಲು  ವಿಫಲವಾಗಿದೆ. ಕಾಶ್ಮೀರ ವಿಚಾರದಲ್ಲಿ ಟರ್ಕಿ ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದರೆ, ಉಳಿದ ದೇಶಗಳು   ನಿರಾಶೆ ಮೂಡಿಸಿವೆ.

370 ನೇ ವಿಧಿ   ರದ್ದುಗೊಳಿಸಿದ ನಂತರವೂ  ಪಾಕಿಸ್ತಾನದ  ವಾದಗಳಿಗೆ  ಯು ಎ ಇ  ಬೆಂಬಲ ವ್ಯಕ್ತಪಡಿಸಿಲ್ಲ.    ಕೇಂದ್ರಾಡಳಿತ   ಪ್ರದೇಶವಾಗಿ ಬದಲಾದ ನಂತರ  ಕಾಶ್ಮೀರದಲ್ಲಿ ಹೂಡಿಕೆಗೆ  ದುಬೈ ಒಪ್ಪಂದ   ಮಾಡಿಕೊಂಡಿದೆ  ಎಂದರೆ    ಜಮ್ಮು ಕಾಶ್ಮೀರ    ಕೇಂದ್ರಾಡಳಿತ ಪ್ರದೇಶವೆಂದು  ಗುರುತಿಸಿದೆ   ಎಂದು ಭಾವಿಸಲಾಗಿದೆ.  ಇದು ಪಾಕಿಸ್ತಾನಕ್ಕೆ    ಕಾರ್ಯತಂತ್ರದ  ಹಿನ್ನಡೆ ಎಂದು ಪರಿಗಣಿಸಲಾಗಿದೆ.

ಕೇಂದ್ರ  ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಸೋಮವಾರ  ಪತ್ರಿಕಾ ಪ್ರಕಟಣೆ ನೀಡಿದ್ದು,   ಒಪ್ಪಂದದ ಪ್ರಕಾರ,  ದುಬೈ ಸರ್ಕಾರ    ಜಮ್ಮು - ಕಾಶ್ಮೀರದ   ರಿಯಲ್ ಎಸ್ಟೇಟ್  ವಲಯದಲ್ಲಿ  ಹೂಡಿಕೆ ಮಾಡಲಿದೆ.    ಇದರಲ್ಲಿ   ಇಂಡಸ್ಟ್ರಿಯಲ್ ಪಾರ್ಕ್, ಐಟಿ ಟವರ್ಸ್, ವಿವಿಧೋದ್ದೇಶ ಟವರ್, ಲಾಜಿಸ್ಟಿಕ್ಸ್, ಮೆಡಿಕಲ್ ಕಾಲೇಜು  ಹಾಗೂ  ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸೇರಿವೆ.

ಆದರೆ ,   ಈ   ಒಪ್ಪಂದದ   ಒಟ್ಟು ಮೌಲ್ಯ  ಎಷ್ಟು ಎಂಬುದನ್ನು  ನಿರ್ದಿಷ್ಟಪಡಿಸಿಲ್ಲ.

ಜಮ್ಮು -  ಕಾಶ್ಮೀರ   ತನ್ನ ಸ್ವಾಯತ್ತ ಸ್ಥಾನಮಾನ     ಕಳೆದುಕೊಂಡು   ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ  ಪರಿವರ್ತಿಸಿದ   ನಂತರ ವಿದೇಶಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿರುವುದು   ಇದೇ ಮೊದಲು.

ಜಮ್ಮು ಮತ್ತು ಕಾಶ್ಮೀರದಲ್ಲಿ ಅಭಿವೃದ್ಧಿಯ ಗತಿ  ತ್ವರಿತಗೊಂಡಿರುವುದನ್ನು   ಜಗತ್ತು ಗುರುತಿಸಿದೆ   ಎಂಬುದಕ್ಕೆ ದುಬೈ ಸರ್ಕಾರದೊಂದಿಗಿನ  ಒಪ್ಪಂದ   ಸಾಕ್ಷಿಯಾಗಿದೆ  ಎಂದು ಕೇಂದ್ರ ವಾಣಿಜ್ಯ  ಹಾಗೂ  ಕೈಗಾರಿಕಾ   ಸಚಿವ ಪಿಯೂಷ್ ಗೋಯಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಈ ಒಪ್ಪಂದ   ಇಡೀ ಜಗತ್ತಿಗೆ ಬಲಿಷ್ಟ  ಸಂಕೇತ   ರವಾನಿಸುತ್ತದೆ.   ಭಾರತ  ವಿಶ್ವ ಶಕ್ತಿಯಾಗುತ್ತಿದೆ  ಜಮ್ಮು - ಕಾಶ್ಮೀರ   ಇದರಲ್ಲಿ   ಪ್ರಮುಖ ಪಾತ್ರ ವಹಿಸುತ್ತದೆ."

"ಈ ಎಂ  ಓ  ಯು ಒಂದು ಮೈಲಿಗಲ್ಲು" ಎಂದು ಪಿಯೂಷ್ ಗೋಯಲ್  ಬಣ್ಣಿಸಿದ್ದಾರೆ.


ಸುದ್ದಿ ಓದಿ