ಅಂತರರಾಷ್ಟ್ರೀಯ

ಬಹರೇನ್ ನಲ್ಲಿ 200 ವರ್ಷಗಳ ಹಿಂದೂ ದೇಗುಲದಲ್ಲಿ ಜೈಶಂಕರ್ ಪೂಜೆ

ಬಹರೇನ್ ನಲ್ಲಿ 200 ವರ್ಷಗಳ  ಹಿಂದೂ ದೇಗುಲದಲ್ಲಿ  ಜೈಶಂಕರ್ ಪೂಜೆ

ಮನಮಾ, ನವೆಂಬರ್ 25:  ಭಾರತ  ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್  ಬಹರೇನ್ ನಲ್ಲಿರುವ   ಶ್ರೀನಾಥ್ ಜೀ   ದೇವಾಲಯದಲ್ಲಿ    ವಿಶೇಷ ಪೂಜೆ  ನೆರವೇರಿಸಿದರು.   ಈ  ದೇಗುಲ  ಸುಮಾರು  200 ವರ್ಷಗಳಷ್ಟು ಪುರಾತನ ಎಂಬುದು ವಿಶೇಷ.    ಈ  ವಿಷಯವನ್ನು  ಜೈ ಶಂಕರ್ ಟ್ವೀಟ್ ನಲ್ಲಿ  ತಿಳಿಸಿದ್ದಾರೆ.  ಈ ದೇಗುಲ ಬಹ್ರೇನ್ -  ಭಾರತ ನಡುವಣ  ನಿಕಟ ಸಂಬಂಧದ  ಸಂಕೇತವಾಗಿದೆ ಎಂದು ಹೇಳಿದ್ದಾರೆ.

ಮನಾಮದಲ್ಲಿರುವ  200 ವರ್ಷಗಳ ಹಳೆಯ ಶ್ರೀನಾಥ್ ಜೀ  ದೇವಾಲಯ  ದರ್ಶನದೊಂದಿಗೆ  ಈ ದಿನ  ಪ್ರಾರಂಭಿಸಿದೆ. ಬಹ್ರೇನ್‌ನೊಂದಿಗಿನ  ನಮ್ಮ ದೇಶ  ಹಲವಾರು  ಶತಮಾನಗಳಿಂದ  ನಿಕಟ ಸಂಬಂಧ ಹೊಂದಿದೆ ಎಂಬುದಕ್ಕೆ  ಈ ದೇವಾಲಯ  ಸಾಕ್ಷಿಯಾಗಿದೆ  ಎಂದು  ಜೈಶಂಕರ್  ವಿವರಿಸಿದ್ದಾರೆ. ಎರಡು ದಿನಗಳ ಬಹ್ರೇನ್‌  ಪ್ರವಾಸವನ್ನು ಸಚಿವ ಜೈಶಂಕರ್  ಮಂಗಳವಾರ ದಿಂದ  ಆರಂಭಿಸಿದ್ದಾರೆ.

ಮಂಗಳವಾರ ಅವರು ಬಹ್ರೇನ್  ವಿದೇಶಾಂಗ ಸಚಿವ ಡಾ.ಅಬ್ದುಲ್ಲತೀಫ್ ಬಿನ್ ರಶೀದ್ ಅಲ್ ಜಯಾನಿ ಅವರೊಂದಿಗೆ ಮಾತುಕತೆ ನಡೆಸಿದರು. ಉಭಯ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳು, ವಿವಿಧ ಕ್ಷೇತ್ರಗಳಲ್ಲಿನ ಸಂಬಂಧಗಳ ಬಗ್ಗೆ ಚರ್ಚೆ ನಡೆಸಿದರು. 

ಸುದ್ದಿ ಓದಿ