ಮುಂಡರಗಿ

ಆಶ್ರಯ ಮನೆ ಹಂಚಿಕೆ ಶೀಘ್ರದಲ್ಲಿ ಬಡವರಿಗೆ ಹಂಚಿಕೆ ಮಾಡಬೇಕೆಂದು ಮನವಿ

ಆಶ್ರಯ ಮನೆ ಹಂಚಿಕೆ ಶೀಘ್ರದಲ್ಲಿ ಬಡವರಿಗೆ ಹಂಚಿಕೆ ಮಾಡಬೇಕೆಂದು ಮನವಿ

ಲೋಕದರ್ಶನ ವರದಿ

ಮುಂಡರಗಿ 30: ಆಶ್ರಯ ಮನೆ ಹಂಚಿಕೆ ಶೀಘ್ರದಲ್ಲಿ ಬಡವರಿಗೆ ಹಂಚಿಕೆ ಮಾಡಬೇಕೆಂದು ಸ್ವಾಭಿಮಾನಿ ಕನರ್ಾಟಕ ರಕ್ಷಣಾ ವೇದಿಕೆ ಮುಂಡರಗಿ ಘಟಕದಿಂದ ಆಗ್ರಹಿಸಿ ಮುಂಡರಗಿ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವರ ವಾರ್ಡ ನಂ. 23 ಬಡಜನತೆಗಾಗಿ ಆಶ್ರಯ ಮನೆ ಹಂಚಿಕೆ ವಿಳಂಬವಾಗುತ್ತಿದ್ದು ಪುರಸಭೆಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿ ಬಡಜನರಿಗಾಗಿ ಆಶ್ರಯ ಮನೆ ಹಕ್ಕು ಪತ್ರವನ್ನು ವೈಜ್ಞಾನಿಕವಾಗಿ ಕೊಡಬೇಕೆಂದು ಮಾನ್ಯರಲ್ಲಿ ವಿನಂತಿಸುತ್ತ ಸುಮಾರು ವರ್ಷಗಳಿಂದ ಆಶ್ರಯ ಜೀವನವನ್ನು ಸ್ವಚ್ಛಗೊಳಿಸಿ ಬರೀ ರಾಜಕಾರಣ ಮಾಡುತ್ತಿರುವ ಆಡಳಿತ ಮಂಡಳಿಯವರಿಗೆ ನಮ್ಮದು ಒಂದು ಧಿಕ್ಕಾರ ದಿನನಿತ್ಯ ಮಳೆಯಿಂದ ಹಳೆಯ ಮನೆಗಳು ಸೂರುತ್ತಿದ್ದು ಪರತಿ ಮನೆಯಲ್ಲಿ 2-3 ಸಂಸಾರ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದು, ಪುರಸಭೆಯವರು ಪ್ರತಿ ಒಬ್ಬರಿಗೆ ಸೂರು ಒದಗಿಸಿ ಕೊಡಬೇಕೆಂದು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶ್ರೀಮತಿ ತಿರುಮಲ್ಲಮ್ಮ ಕಚೇರಿ ವ್ಯವಸ್ಥಾಪಕರು ಆಶ್ರಯ ಯೋಜನೆ ಮನವಿ ಪತ್ರ ಸ್ವೀಕಾರ ಮಾಡಿದ್ದಾರೆ. 2 ತಿಂಗಳು ಒಳಗೆ ಈ ಸಮಸ್ಯೆಯನ್ನು ಬಗೆಹರಿಸುತ್ತೇನೆಂದು ಒಪ್ಪಿಕೊಂಡಿದ್ದಾರೆ. ಒಂದು ವೇಳೆ ಬಗೆಹರಿಸದಿದ್ದರೆ ನಮ್ಮ ಸ್ವಾಭಿಮಾನಿ ರಕ್ಷಣಾ ವೇದಿಕೆಯಿಂದ 2 ತಿಂಗಳ ನಂತರ ಉಗ್ರ ಹೋರಾಟ ಮಾಡುತೇವೆ ಎಂದು ತಿಳಿಸಿದರು. 

ಈ ಮನವಿ ಪತ್ರವನ್ನು ನಗರ ಘಟಕದ ಅಧ್ಯಕ್ಷರಾದ ದುರ್ಗಪ್ಪ ನಾಗಾವಿ, ಹಾಗೂ ಉಪಾಧ್ಯಕ್ಷರಾದ ತೌಸಿಫ ಮಕಾಂದರ ನೇತೃತ್ವದಲ್ಲಿ  ಸಲ್ಲಿಸಿದರು. ಈ ಸಂದರ್ಭದಲ್ಲಿ ಉತ್ತರ ಕನರ್ಾಟಕ ಅಧ್ಯಕ್ಷರಾದ ಬೆಟಗೇರಿ ಭಕ್ಷಿಬಾಯ, ಕಾರ್ಯದಶರ್ಿಯಾದ ಈರಣ್ಣ ಬಂಡಿವಡ್ಡರ ಮತ್ತು ಸಹ-ಕಾರ್ಯದಶರ್ಿಯಾದ ಜಯಂತಿ ಕಮ್ಮಾರ ಹಾಗೂ ಸದಸ್ಯರು ಪೇರಮ್ಮ ಬಂಡಿವಡ್ಡರ, ಅಕ್ಕಮ್ಮ, ನಸೀಮ್ ಗದಗ, ಸಂಗೀತಾ, ಸೈನಾಜ ನವಲಗುಂದ ಈ ಮನವಿ ಪತ್ರವನ್ನು ಸಲ್ಲಿಸುವದಲ್ಲಿದ್ದರು 

ಸುದ್ದಿ ಓದಿ