ಯೋಧ, ರೈತರಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯ: ಶಿವಶಂಕರ ಸ್ವಾಮಿಜಿ
ಹುಕ್ಕೇರಿ 19: ತಾಲೂಕಿನ ಮದಮಕ್ಕನಾಳ ಗ್ರಾಮದ ಯೋಧ ಮಂಜುನಾಥ ಪಾಟೀಲ ದೇಶ ಸೇವೆ ಮಾಡಿ ನಿವೃತ್ತ ಹೊಂದಿ ಗ್ರಾಮಕ್ಕೆ ಆಗಮಿಸಿದಾಗ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿ ಬರಮಾಡಿಕೊಂಡರು.
ಮದಮಕ್ಕನಾಳ ಗ್ರಾಮದ ಯುವಕ ಮಂಜುನಾಥ ಪಾಟೀಲ 17 ವರ್ಷಗಳ ಕಾಲ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಹೊಂದಿ ತಾಯ್ನಾಡಿಗೆ ಆಗಮಿಸಿದಾಗ ಗ್ರಾಮದ ಜನತೆ ಮತ್ತು ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಯ ಪದಾಧಿಕಾರಿಗಳು ವಾದ್ಯಮೇಳಗಳ ಜೊತೆಗೆ ಸುಮಂಗಲೆಯರು ಆರತಿ ಮಾಡಿ ಮೆರವಣಿಗೆ ಮೂಲಕ ಬರಮಾಡಿಕೊಂಡರು. ನಂತರ ಹುಬ್ಬಳ್ಳಿಯ ನೀಲಕಂಠೇಶ್ವರ ಮಠದ ಶಿವಶಂಕರ ಮಹಾಸ್ವಾಮಿಗಳ ಸಾನಿದ್ಯದಲ್ಲಿ, ಕಾಗವಾಡದ ಯತೀಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಗ್ರಾಮಸ್ಥರು ಮತ್ತು ಕುರವಿಶೇಟ್ಟಿ ಸಮಾಜದವರು ಯೋಧ ಮಂಜುನಾಥ ಪಾಟೀಲಗೆ ಸತ್ಕರಿಸಿ ಅಭಿನಂದಿಸಿದರು.
ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ, ಮಹಾದೇವ ಬನ್ನಕ್ಕಗೋಳ, ಹಾಲಿ ಅಧ್ಯಕ್ಷ ರಾಯಪ್ಪಾ ಬನ್ನಕ್ಕಗೋಳ, ಪುಂಡಲೀಕ ಕೋಟಿನವರ, ಶಶಿಕಾಂತ ಮಾನಸ್, ಕಲ್ಲಪ್ಪಾ ಹೇಬ್ಬಾಳೆ, ಅಮರ ವಾಲಿ, ನಿರಂಜನ ಕುರಬೇಟ, ಶಿವು ಪಾಟೀಲ ಮತ್ತು ಇತ್ತಿಚಿಗೆ ನಿವೃತ್ತ ಹೊಂದಿದ ಬೈಲಹೊಂಗಲದ ಯೋಧ ವೀರಭದ್ರ ಕುಂಬಾರ ಇವರನ್ನು ಸತ್ಕರಿಸಿ ಅಭಿನಂದಿಸಲಾಯಿತು.
ವೇದಿಕೆ ಮೇಲೆ ಗ್ರಾಮದ ಹಿರಿಯರಾದ ಬಸವಣ್ಣಿ ಬೆಳವಿ, ಶಿವಗೌಡಾ ಪಾಟೀಲ, ಚನ್ನಬಸಯ್ಯಾ ಹಿರೇಮಠ, ಕೆ ಎಸ್ ಪಾಟೀಲ, ಉಪಸ್ಥಿತರಿದ್ದರು.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು ದೇಶ ಸೇವೆ ಮಾಡುವ ಯೋಧರಿಗೆ ಮತ್ತು ಅನ್ನ ನೀಡುವ ರೈತರಿಗೆ ಗೌರವ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂದು ಮದಮಕ್ಕನಾಳ ಗ್ರಾಮದ ಯೋಧ ದೇಶ ಸೇವೆ ಮಾಡಿ ನಿವೃತ್ತಿ ಹೊಂದಿ ಗ್ರಾಮಕ್ಕೆ ಆಗಮಿಸಿದಾಗ ಅದ್ದೂರಿ ಸ್ವಾಗತದಿಂದ ಬರಮಾಡುಕೊಂಡು ಗೌರವ ನೀಡಿದ ರೀತಿ ಎಲ್ಲರಿಗೂ ಮಾದರಿಯಾಗಿದೆ. ಇದೆ ರೀತಿ ಸರ್ಕಾರ ಮತ್ತು ಜನತೆ ನಿವೃತ್ತ ಯೋಧರಿಗೆ ಗೌರವ ನಿಡುವಂತಾಗಬೇಕು ಎಂದರು.ಮಾಜಿ ಸೈನಿಕರ ಸಂಘದ ಹುಕ್ಕೇರಿ ತಾಲೂಕಾ ಅಧ್ಯಕ್ಷ ಮಾತನಾಡಿ ಮದಮಕ್ಕನಾಳ ಗ್ರಾಮದ ಜನತೆ ಇಂದು ಇಬ್ಬರು ನಿವೃತ್ತ ಯೋಧರಿಗೆ ಸನ್ಮಾನ ನೀಡಿ ಗೌರವಿಸಿದೆ. ಇದೆ ರೀತಿ ರೈತ ಮತ್ತು ಯೋಧರಿಗೆ ಗೌರವದಿಂದ ನೊಡಿಕೋಳ್ಳುವಂತೆ ಮನವಿ ಮಾಡಿದರು.ಯೋಧ ಮಂಜುನಾಥ ಪಾಟೀಲ ಮಾತನಾಡಿ ನಾನು 17 ವರ್ಷ ದೇಶ ಸೇವೆ ಮಾಡಿ ಇಂದು ನನ್ನ ಹುಟ್ಟೂರಿಗೆ ಬಂದಿದ್ದೇನೆ. ಈಗಲೂ ಸಹ ನಾನು ಸಮಾಜ ಸೇವೆಗೆ ನನ್ನ ಮುಂದಿನ ಜೀವನ ಮುಡುಪಾಗಿಡುತ್ತೇನೆ. ನನಗೆ ಇಂದು ಸ್ವಾಗತ ನೀಡಿ ಅಭಿನಂದಿಸಿದ ಜನತೆಗೆ ಕೃತಜ್ಞತೆ ಹೇಳುತ್ತೆನೆ ಎಂದರು.
ಮದಮಕ್ಕನಾಳ, ಬೆಣಿವಾಡ, ಶಿರಗಾಂವ, ಸುಲ್ತಾನಪೂರ ಗ್ರಾಮಸ್ಥರು ಮತ್ತು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಮಂಜುನಾಥ ಪಾಟೀಲ ಕುಟುಂಬಸ್ಥರು ಉಪಸ್ಥಿತರಿದ್ದರು.