ಮೂಡಲಗಿ

ಶವಸಂಸ್ಕಾರಕ್ಕೆ ಸಹಾಯ ಧನದ ಚೆಕ್ ವಿತರಣೆ

ಶವಸಂಸ್ಕಾರಕ್ಕೆ ಸಹಾಯ ಧನದ ಚೆಕ್ ವಿತರಣೆ

ಮೂಡಲಗಿ 03: ಇತ್ತೀಚೆಗೆ ಮರಣ ಹೊಂದಿದ್ದ ಪರಿಶಿಷ್ಟ ಜಾತಿಯ ಯಲ್ಲವ್ವ ಯಲ್ಲಪ್ಪ ಸಮಗಾರ ಇವರು ನಿಧನರಾಗಿದ್ದು ಇವರ ಶವ ಸಂಸ್ಕಾರಕ್ಕೆ  ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಪಂಚಾಯತಿಯಿಂದ ಇಂದು ಸಹಾಯಧನ ಚಕ್ ನೀಡಲಾಯಿತು. 

ನಿಧನರಾದ ಯಲ್ಲವ್ವ ಅವರ ಪುತ್ರ ಕಲ್ಲಪ್ಪ್ಪ ಸಮಗಾರ ಅವರಿಗೆ ಸಹಾಯ ಧನದ 5 ಸಾವಿರ ರೂಗಳ ಚೆಕ್‌ನ್ನು ಕುಲಗೋಡ ಗ್ರಾಮ ಪಂಚಾಯತಿ ಅಧ್ಯಕ್ಷ ತಮ್ಮಣ್ಣ ದೇವರ ಹಾಗೂ ಗ್ರಾಪಂ ಸದಸ್ಯರು ನೀಡಿದರು. 

ತಮ್ಮಣ್ಣ ದೇವರ ಮಾತನಾಡಿ, ಗ್ರಾಮ ಪಂಚಾಯತ ಸ್ವಂತ ನಿಧಿಯ ಶೇ. 25 ರಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ವ್ಯಕ್ತಿ ಅಂತ್ಯ ಸಂಸ್ಕಾರಕ್ಕೆ ಸಹಾಯಧನ ನೀಡುವುದು ಸರ್ಕಾರದ ಆದೇಶವಿದ್ದು ಅದರಂತೆ ನಾವು ಗ್ರಾಪಂ ನಿಂದ ಚೆಕ್ ನೀಡಿದ್ದೇವೆ ಎಂದರು. 

ಸಂದರ್ಭದಲ್ಲಿ ಮುಖಂಡ ಬಸನಗೌಡ ಪಾಟೀಲ. ಶ್ರೀಪತಿ ಗಣಿ. ಅಶೋಕ ಪೂಜೇರಿ. ಶಂಕರ ಹಾದಿಮನಿ. ಹಾರುಣ ಝಾರೆ. ಶಾನೂರ ಮುಲ್ಲಾ. ಹಣಮಂತ ಮಡಿವಾಳರ. ಸುರೇಶ ಸಸಾಲಟ್ಟಿ.  ಹಾಗೂ ಗ್ರಾಪಂ ಸದಸ್ಯರು ಹಾಗೂ ಸಿಬ್ಬಂದಿ ವರ್ಗ. ಮುಖಂಡರು ಇದ್ದರು. 


ಸುದ್ದಿ ಓದಿ