"ಓಮಿಕ್ರಾನ್" ಭೀತಿ ಗಡಿಗಳನ್ನು ತಾತ್ಕಾಲಿಕ ಮುಚ್ಚಿಕೊಂಡ ಇಸ್ರೇಲ್
ಟೆಲ್ ಅವಿವ್, ನ.28 - ಕೊರೊನಾ ವೈರಸ್ ನ ಹೊಸ ರೂಪಾಂತರಿ ಒಮಿಕ್ರಾನ್ ಹರಡುವುದನ್ನು ತಡೆಯುವ ಕ್ರಮವಾಗಿ ಇಸ್ರೇಲ್ ಎರಡು ವಾರಗಳ ಕಾಲ ವಿದೇಶಿಯರ ಪ್ರವೇಶವನ್ನು ನಿಷೇಧಿಸಿದೆ ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರ ಕಚೇರಿ ಮಾಹಿತಿ ನೀಡಿದೆ.
ಶನಿವಾರ ರಾತ್ರಿ ನಡೆದ ಕೊರೊನಾ ಸಂಪುಟ ಸಭೆಯಲ್ಲಿ ಎಲ್ಲಾ ದೇಶಗಳ ವಿದೇಶಿಯರಿಗೆ ಗಡಿಗಳನ್ನು 14 ದಿನಗಳ ಕಾಲ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ವಿದೇಶಗಳಿಂದ ಹಿಂದಿರುಗುವ ಇಸ್ರೇಲಿ ನಾಗರಿಕರು ವಿಮಾನ ನಿಲ್ದಾಣದಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ ಒಳಗಾಗಬೇಕು. ನಂತರ ಅವರು ಸ್ವಯಂ-ಪ್ರತ್ಯೇಕವಾಗಿರಬೇಕು ನಂತರ ಅವರು ಮತ್ತೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಲಾಗಿದೆ.
ಲಸಿಕೆ ಹಾಕಿಸಿಕೊಂಡವರು ಅಥವಾ ಈ ಹಿಂದೆ ಕೋವಿಡ್ ಸೋಂಕಿಗೆ ಒಳಗಾಗಿದ್ದವರಿಗೆ ಕ್ವಾರಂಟೈನ್ ಮೂರು ದಿನಗಳ ಕ್ವಾರಂಟೈನ್ ನಿಗಧಿಪಡಿಸಲಾಗಿದೆ. ಲಸಿಕೆ ಹಾಕಿಸಿಕೊಳ್ಳದ ಇಸ್ರೇಲಿಗಳಿಗೆ ಎರಡನೇ ಪರೀಕ್ಷೆ ನೆಗೆಟಿವ್ ಬಂದರೆ ಏಳು ದಿನಗಳು, ಎರಡನೇ ಪರೀಕ್ಷೆಯಿಲ್ಲದೆ 14 ದಿನಗಳು ಆಗಮನದ ನಂತರ ಕಡ್ಡಾಯ ಕ್ವಾರಂಟೈನ್ ನಿಗಧಿಪಡಿಸಲಾಗಿದೆ.
ಆಫ್ರಿಕನ್ ದೇಶಗಳಿಂದ ಬರುವ ಇಸ್ರೇಲಿ ನಾಗರಿಕರು ವಿಶೇಷ ಹೋಟೆಲ್‌ಗಳಲ್ಲಿ ಸ್ವಯಂ-ಪ್ರತ್ಯೇಕಿಸಬೇಕಾಗುತ್ತದೆ . ಒಮಿಕ್ರಾನ್ ರೂಪಾಂತರಿ ಪಾಸಿಟಿವ್ ಬಂದಿರುವ ಎಲ್ಲ ಜನರ ಮೇಲೆ ನಿಗಾವಹಿಸಲಾಗುವುದು
ಇಸ್ರೇಲ್‌ನಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಪ್ರಕರಣ ಶುಕ್ರವಾರ ದಾಖಲಾಗಿದೆ. ಇನ್ನೂ ಹಲವರು ತಮ್ಮ ಪರೀಕ್ಷಾ ಫಲಿತಾಂಶಗಳಿಗಾಗಿ ಕಾಯುತ್ತಿರುವ ಕಾರಣ ಇತರ ಶಂಕಿತ ಪ್ರಕರಣಗಳು ದೃಢೀಕರಣ ಬಾಕಿ ಉಳಿದಿವೆ.
ಶುಕ್ರವಾರ, WHO ಹೊಸ ದಕ್ಷಿಣ ಆಫ್ರಿಕಾದ ತಳಿಯನ್ನು ಕಳವಳಕಾರಿ ರೂಪಾಂತರಿ ಎಂದು ಗುರುತಿಸಿದೆ, ಕಾರಣ ಈ ತಳಿ ಹೆಚ್ಚು ತ್ವರಿತವಾಗಿ ಹರಡುವ, ಅಪಾಯಕಾರಿ ತಳಿಯಾಗಿದೆ ಎಂದು ವರ್ಗೀಕರಿಸಿದೆ. ಜರ್ಮನಿ, ಇಟಲಿ ಹಾಗೂ ಜೆಕ್ ಗಣರಾಜ್ಯದಲ್ಲಿ ಹೊಸ ರೂಪಾಂತರಿ ಪ್ರಕರಣಗಳನ್ನು ದೃಢಪಡಿಸಲಾಗಿದೆ.