ಅಂತರರಾಷ್ಟ್ರೀಯ

ಗಾಜಾ ಪಟ್ಟಿ ಮೇಲೆ ಇಸ್ರೇಲ್ ಭೀಕರ ದಾಳಿ

ಗಾಜಾ ಪಟ್ಟಿ ಮೇಲೆ ಇಸ್ರೇಲ್ ಭೀಕರ ದಾಳಿ

ಜೆರುಸಲೇಂ: ಜೂನ್ 18: ಗಾಜಾ ಪಟ್ಟಿಯಲ್ಲಿರುವ 3 ಸೇನಾ ಪೋಸ್ಟ್‌ಗಳು ಮತ್ತು ಶಸ್ತ್ರಾಸ್ತ್ರ ಕಾರ್ಖಾನೆಯ ಮೇಲೆ ಇಸ್ರೇಲ್ ಶನಿವಾರ ದಾಳಿ ಮಾಡಿದೆ.

ಇಸ್ರೇಲ್ ವಿರುದ್ಧದ ರಾಕೆಟ್ ದಾಳಿಯನ್ನು ವಿರೋಧಿಸಿ ಗಾಜಾ ಪಟ್ಟಿಯಲ್ಲಿರುವ ಮೂರು ಮಿಲಿಟರಿ ಪೋಸ್ಟ್‌ಗಳು ಮತ್ತು ಶಸ್ತ್ರಾಸ್ತ್ರ ಕಾರ್ಖಾನೆಯ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಮಿಲಿಟರಿ ಫೋರ್ಸಸ್ (ಐಡಿಎಫ್) ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಮಧ್ಯೆ ಗಾಜಾ ಪಟ್ಟಿಯಿಂದ ರಾಕೆಟ್ ಅನ್ನು ಇಸ್ರೇಲ್‌ನತ್ತ ಉಡಾಯಿಸಲಾಯಿತು. ಈ ವೇಳೆ ಮಾರ್ಗಮಧ್ಯೆಯೇ ಆ ರಾಕೆಟ್ ಅನ್ನು ಹೊಡೆದುರುಳಿಸಲಾಯಿತು ಎಂದು ಇಸ್ರೇಲ್ ಹೇಳಿಕೊಂಡಿದೆ.

ಐಡಿಎಫ್ ಹೇಳಿಕೆಗೂ ಸ್ವಲ್ಪ ಸಮಯದ ಮೊದಲು ಇಸ್ರೇಲ್ ಮೇಲೆ ರಾಕೆಟ್ ಅನ್ನು ಹಾರಿಸಲಾಯಿತು, ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲಿ ಮಿಲಿಟರಿ ಪಡೆ, ಗಾಜಾ ಪಟ್ಟಿಯಲ್ಲಿರುವ ಹಮಾಸ್ ನ ಹಲವು ಸ್ಥಳಗಳ ಮೇಲೆ ದಾಳಿ ಮಾಡಿತು. ಈ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಕಾರ್ಖಾನೆ ಹಾಗೂ ಇತರ ಮೂರು ಹಮಾಸ್ ಮಿಲಿಟರಿ ಪೋಸ್ಟ್‌ಗಳ ಮೇಲೂ ದಾಳಿ ನಡೆಸಲಾಯಿತು. ಗಾಜಾ ಪಟ್ಟಿಯಿಂದ ಬೆದರಿಕೆ ಹೆಚ್ಚಾಗುತ್ತಿದೆ. ಇದಕ್ಕೆ ಹಮಾಸ್ ಹೊಣೆಹೊತ್ತುಕೊಳ್ಳಬೇಕಿದೆ ಎಂದು ಇಸ್ರೇಲ್ ಹೇಳಿದೆ.

ಸುದ್ದಿ ಓದಿ