ಗುಜರಾತ್ ಟೈಟಾನ್ಸ್ ಸೋಲಿಗೆ ಕಾರಣ ನಾಯಕ ಹಾರ್ದಿಕ್ ಪಾಂಡ್ಯ?
ಅಹಮದಾಬಾದ್ 01: 2023ರ ಐಪಿಎಲ್ ಮುಗಿದಿದೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಕೊನೆಯ ಎರಡು ಎಸೆತದಲ್ಲಿ 10 ರನ್ ಬೇಕಿದ್ದಾಗ ರವೀಂದ್ರ ಜಡೇಜಾ ಅವರು ಮೋಹಿತ್ ಶಮರ್ಾ ಅವರ ಎಸೆತಗಳನ್ನು ಸಿಕ್ಸ್ ಮತ್ತು ಫೋರ್ ಹೊಡೆದು ತಂಡಕ್ಕೆ ಜಯ ತಂದಿತ್ತರು.
ಈ ಬಗ್ಗೆ ಮಾತನಾಡಿದ ಮಾಜಿ ಆಟಗಾರ ವೀರೆಂದ್ರ ಸೆಹವಾಗ್, ಈ ಸೋಲಿಗೆ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ದೂರಿದ್ದಾರೆ.
ಕೆಲವರು ಚೆನ್ನಾಗಿ ಬೌಲಿಂಗ್ ಮಾಡುವಾಗ ನೀವು ಯಾಕೆ ಹೋಗಿ ಅವನೊಂದಿಗೆ ಮಾತನಾಡುತ್ತೀರಿ? ಬ್ಯಾಟರ್ಗೆ 2 ಬಾಲ್ ನಲ್ಲಿ 10 ಬೇಕು, ಈ ವೇಳೆ ಹೇಗೆ ಬೌಲ್ ಹಾಕಬೇಕು ಎಂದು ಬೌಲರ್ ಗೆ ತಿಳಿದಿದೆ. ಹಾಗಾದರೆ ನೀವು ಅವನ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ? ಎಂದಿದ್ದಾರೆ
ಸೆಹವಾಗ್ ಮಾತ್ರವಲ್ಲದೆ ಸುನಿಲ್ ಗಾವಸ್ಕರ್ ಕೂಡಾ ಹಾದರ್ಿಕ್ ಪಾಂಡ್ಯ ಅವರನ್ನು ಟೀಕೆ ಮಾಡಿದ್ದಾರೆ. ಹಾದರ್ಿಕ್ ಪಾಂಡ್ಯ ಬೌಲರ್ ಮೋಹಿತ್ ಲಯ ತಪ್ಪಿಸಿದರು ಎಂದು ಗಾವಸ್ಕರ್ ದೂರಿದ್ದಾರೆ.