ಅಮೆರಿಕ ರಕ್ಷಣಾ ಸಚಿವಾಲಯವನ್ನು ಕಪ್ಪುಪಟ್ಟಿಗೆ ಸೇರಿಸುವ ಕಾನೂನು ಜಾರಿಗೆ ಇರಾನ್ ಅಧ್ಯಕ್ಷ ಕರೆ
ಟೆಹ್ರಾನ್, ಜ13: ಅಮೆರಿಕದ
ರಕ್ಷಣಾ ಇಲಾಖೆಯನ್ನು ‘ಭಯೋತ್ಪಾದನಾ
ಸಂಘಟನೆ’ ಎಂದು ಘೋಷಿಸಿ
ಕಪ್ಪುಪಟ್ಟಿಗೆ ಸೇರಿಸುವಂತಾಗುವ ಕಾನೂನು
ಜಾರಿಗೆ ಇರಾನ್ ಅಧ್ಯಕ್ಷ
ಹಸನ್ ರೌಹಾನಿ ಸೋಮವಾರ
ಆದೇಶವೊಂದನ್ನು ಹೊರಡಿಸಿದ್ದಾರೆ.
ಇರಾನ್ ಸಂಸತ್ ಈಗಾಲೇ ಅಂಗೀಕರಿಸಿರುವ ಕಾನೂನು ಅನ್ನು ಇರಾನ್ ನ ಸಂಬಂಧಿತ ಸಂಸ್ಥೆಗಳು ಅಂಗೀಕರಿಸಬೇಕು ಎಂದು ರೌಹಾನಿ ಕರೆ ನೀಡಿದ್ದಾರೆ.
‘ ಅಮೆರಿಕದ ರಕ್ಷಣಾ ಸಚಿವಾಲಯದ ಎಲ್ಲ ಸದಸ್ಯರು, ಅದಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ಕಂಪೆನಿಗಳು ಮತ್ತು ಇಸ್ಲಾಮಿಕ್ ರೆವಲ್ಯೂಷನ್ ಗಾಡ್ರ್ಸ್ ಕೋರ್ ನ ಕುಡ್ಸ್ ನ ಮಾಜಿ ಕಾಮಾಂಡರ್ ಖಾಸೆಮ್ ಸೊಲೆಮಾನಿ ಹತ್ಯೆಗೆ ಸಂಚು ರೂಪಿಸಿದ ಅಮೆರಿಕದ ಕಮಾಂಡರ್ ಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು.’ ಎಂಬ ನಿರ್ಣಯದ ಪರ ಜ 7ರಂದು ಇರಾನ್ ಸಂಸತ್ ನಲ್ಲಿ ಮತ ಹಾಕಲಾಗಿತ್ತು.
ಇರಾನ್ ನ ಪರಮೋಚ್ಛ ಶಾಸಕಾತ್ಮಕ ಸಂಸ್ಥೆಯಾದ ಗಾರ್ಡಿಯನ್ ಕೌನ್ಸಿಲ್ ಆಫ್ ಕಾನ್ಸಿಟಿಟ್ಯೂಷನ್ ಈ ಕಾನೂನು ಜಾರಿಗೊಳಿಸಿತ್ತು.
ಪಶ್ಚಿಮ ಏಷ್ಯಾದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ಪಡೆಗಳನ್ನು ‘ವಿದೇಶಿ ಭಯೋತ್ಪಾದಕ ಸಂಘಟನೆ’ ಎಂದು 2019ರ ಏಪ್ರಿಲ್ ನಲ್ಲಿ ಇರಾನ್ ನ ರಾಷ್ಟ್ರೀಯ ಭದ್ರತಾ ಮಂಡಳಿ ಪ್ರಕಟಿಸಿತ್ತು.