ಅಂತರರಾಷ್ಟ್ರೀಯ

ಕಣ್ಗಾವಲು ಉಪಕರಣ ತಪಾಸಣೆಗೆ ಅವಕಾಶ ನೀಡದ ಇರಾನ್;‌ ಐಎಇಎ ಆರೋಪ

ಕಣ್ಗಾವಲು ಉಪಕರಣ  ತಪಾಸಣೆಗೆ  ಅವಕಾಶ ನೀಡದ ಇರಾನ್;‌ ಐಎಇಎ ಆರೋಪ

ವಿಯೆನ್ನಾ,  27: ಅಂತರಾಷ್ಟ್ರೀಯ ಪರಮಾಣು  ಶಕ್ತಿ   ಸಂಸ್ಥೆ (ಐಎಇಎ) ಇರಾನ್‌ನ ಕಾರಾಜ್ ಸೆಂಟ್ರಿಫ್ಯೂಜ್ ಅಸೆಂಬ್ಲಿ  ಕೇಂದ್ರದಲ್ಲಿರುವ ಕಣ್ಗಾವಲು ಕ್ಯಾಮೆರಾಗಳ  ತಪಾಸಣೆಗೆ    ತನ್ನ   ಪರಿಶೀಲನಾ ಅಧಿಕಾರಿಗಳಿಗೆ  ಅವಕಾಶ  ನೀಡಲಾಗಿಲ್ಲ ಎಂದು ಹೇಳಿದೆ,       ಕಣ್ಗಾವಲು   ಉಪಕರಣಗಳ ಸೇವೆ   ಪರಿಶೀಲನೆಗೆ ಅವಕಾಶ  ಕಲ್ಪಿಸುವ  ಒಪ್ಪಂದದ ಹೊರತಾಗಿಯೂ   ಇರಾನ್‌  ಅವಕಾಶ ನೀಡಿಲ್ಲ ಎಂದು ಹೇಳಿದೆ.

ಸ್ಪುಟ್ನಿಕ್ ಗೆ  ಭಾನುವಾರ  ಲಭ್ಯವಾಗಿರುವ    ಐಎಇಎ  ಹೇಳಿಕೆಯ ಪ್ರಕಾರ,  ಕಾರಾಜ್ ಸೌಲಭ್ಯವನ್ನು ಹೊರತುಪಡಿಸಿ,  ಉಳಿದ  ಎಲ್ಲ  ಅಗತ್ಯವಿರುವ   ಸ್ಥಳಗಳಿಗೆ"  ತನ್ನ  ಪರೀಕ್ಷಕರಿಗೆ  ಪ್ರವೇಶ ನೀಡಲಾಗಿದೆ. ಎಂದು ಹೇಳಿದೆ.

ತಪಾಸಣಾ ಅಧಿಕಾರಿಗಳಿಗೆ   ಪ್ರವೇಶ  ನಿರಾಕರಿಸುವುದು ಸೆಪ್ಟೆಂಬರ್ ರ  12 ಒಪ್ಪಂದ  ಉಲ್ಲಂಘಿಸುತ್ತದೆ ಎಂದು  IAEA ಮಹಾನಿರ್ದೇಶಕ ರಾಫೆಲ್ ಗ್ರೋಸಿ ಒತ್ತಿ ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ಇರಾನ್‌ನ ಪರಮಾಣು ಶಕ್ತಿ ಸಂಘಟನೆ (ಎಇಒಐ) ಮುಖ್ಯಸ್ಥ ಮೊಹಮ್ಮದ್ ಎಸ್ಲಾಮಿಯೊಂದಿಗೆ ಮಾತುಕತೆ ನಡೆಸಲು ಗ್ರೋಸಿ   ಟೆಹ್ರಾನ್‌ಗೆ ಪ್ರಯಾಣ ಬೆಳೆಸಿದರು. ಮಾತುಕತೆ ನಂತರ, ಇಬ್ಬರೂ ಜಂಟಿ ಹೇಳಿಕೆಯನ್ನು ನೀಡಿದ್ದರು.  IAEA  ಸಂಸ್ಥೆಯ ತಪಾಸಣೆಗೆ    ಸಹಕಾರ  ನೀಡುವ  ಇಚ್ಛೆ ವ್ಯಕ್ತಪಡಿಸಿ,  ದೇಶದ ಸೂಕ್ಷ್ಮ ಪರಮಾಣು ತಾಣಗಳಲ್ಲಿ ಕಣ್ಗಾವಲು ವ್ಯವಸ್ಥೆಯ  ಮೆಮೊರಿ ಕಾರ್ಡ್‌ಗಳನ್ನು IAEAಗೆ   ನೀಡಲು ಒಪ್ಪಿಕೊಂಡಿದ್ದರು.

ಸುದ್ದಿ ಓದಿ