ವರ್ಷಾ೦ತ್ಯದ ವೇಳೆಗೆ ಇಟಲಿಗೆ ವಿಮಾನ ಸಂಪರ್ಕ ರದ್ದು : ಇರಾನ್
ತೆಹ್ರಾನ್, ನ 4: ಇರಾನ್ ನ ಮಹಾನ್ ಏರ್ ಸಂಸ್ಥೆ ಡಿಸೆಂಬರ್ ವೇಳೆಗೆ ಇಟಲಿಗೆ ವಿಮಾನ ಹಾರಾಟ ರದ್ದುಪಡಿಸಲಿದೆ. ಅಮೆರಿಕ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಇರಾನ್ ನ ವಿಮಾನಯಾನ ಸಂಸ್ಥೆಯ ಮುಖ್ಯಸ್ಥ ಮಸೌದ್ ಅಸ್ಸಾದಿ ಸಲ್ಮಾನಿ ತಿಳಿಸಿದ್ದಾರೆ. ಇಟಲಿ ನಗರಗಳಾದ ರೋಮ್ ಮತ್ತು ಮಿಲನ್ ಗಳಿಗೆ ಡಿಸೆಂಬರ್ 21 ರ ವರೆಗೆ ಮಹಾನ್ ವಿಮಾನಯಾನ ಸಂಸ್ಥೆಯ ಸೇವೆ ಇರಲಿದೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇರಾನ್ ವೈಮಾನಿಕ ಸಂಸ್ಥೆ ಗುರಿಯಾಗಿಸಿ ಅಮೆರಿಕ ನಿರ್ಧಾರ ಹೇರಿರುವುದರ ಭಾಗವಾಗಿ ಅಮೆರಿಕದ ಒತ್ತಡದ ಪರಿಣಾಮದಿಂದಾಗಿ ಇಟಲಿಗೆ ಮಹಾನ್ ಏರ್ ರದ್ದುಪಡಿಸುವ ತೀರ್ಮಾನಕ್ಕೆ ಬಂದಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಯೂರೋಪ್ ನ ಎರಡು ದೇಶಗಳಾದ ಜರ್ಮನಿ ಮತ್ತು ಫ್ರಾನ್ಸ್ ಗಳು ಮಹಾನ್ ಏರ್ ಸಂಸ್ಥೆಯ ವಿಮಾನಗಳ ಮೇಲೆ ನಿಷೇಧ ಹೇರಿತ್ತು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 