ಇರಾನ್ : 24 ಗಂಟೆಯಲ್ಲಿ 7,654 ಹೊಸ ಕೋವಿಡ್ ಪ್ರಕರಣ ದಾಖಲು
ತೆಹ್ರಾನ್, ಅ. 09: ಇರಾನಿನಲ್ಲಿ ಕಳೆದ ಒಂದೇ ದಿನ 7,654 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು, ಸೋಂಕಿನ ಒಟ್ಟು ಸಂಖ್ಯೆ 5,691,634 ಕ್ಕೆ ಏರಿಕೆಯಾಗಿರುವುದಾಗಿ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಈ ಕುರಿತು ಇರಾನ್‌ನ ರಾಜ್ಯ ಟಿವಿಯಲ್ಲಿ ಪ್ರಸಾರವಾಗಿದ್ದು, ಕಳೆದ 24 ಗಂಟೆಗಳಲ್ಲಿ 173 ಹೊಸ ಸಾವುಗಳ ಬಳಿಕ ಮೃತ ಸಂಖ್ಯೆ 122,370ಕ್ಕೆ ಹೆಚ್ಚಳವಾಗಿದೆ.
ಈವರೆಗೂ ಒಟ್ಟು 5,201,515 ಜನರು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದು, ದೇಶದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ, ಆದರೆ 5,368 ಜನರು ತೀವ್ರ ನಿಗಾ ಘಟಕಗಳಲ್ಲಿ ಉಳಿದಿದ್ದಾರೆ ಎಂದು ಸಚಿವಾಲಯ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ಸೋಂಕು ಪತ್ತೆಗಾಗಿ ದೇಶಾದ್ಯಂತ 33,144,555 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಅಧಿಕೃತ ವರದಿಯಲ್ಲಿ ಸೇರಿಸಲಾಗಿದೆ. ಫೆಬ್ರವರಿ 2020 ರಲ್ಲಿ ಇರಾನ್ ದೇಶದಲ್ಲಿ ಮೊದಲ ಕೋವಿಡ್ 19 ಪ್ರಕರಣ ದಾಖಲಾಗಿತ್ತು